ಪಾನಮತ್ತನಾಗಿ ಮದುವೆ ಮಂಟಪಕ್ಕೆ ಬಂದ ಪೊಲೀಸ್ ವರ ಜೈಲು ಸೇರಿದ
![ಪಾನಮತ್ತನಾಗಿ ಮದುವೆ ಮಂಟಪಕ್ಕೆ ಬಂದ ಪೊಲೀಸ್ ವರ ಜೈಲು ಸೇರಿದ ಪಾನಮತ್ತನಾಗಿ ಮದುವೆ ಮಂಟಪಕ್ಕೆ ಬಂದ ಪೊಲೀಸ್ ವರ ಜೈಲು ಸೇರಿದ](https://www.varthabharati.in/sites/default/files/images/articles/2019/01/20/173822.png)
ಪಾಟ್ನಾ, ಜ. 20: ಪೊಲೀಸ್ ವರನೋರ್ವ ಪಾನಮತ್ತನಾಗಿ ಮದುವೆ ಮಂಟಪಕ್ಕೆ ಆಗಮಿಸಿದ ಘಟನೆ ಬಿಹಾರದ ಭಾಗಲ್ಪುರದ ಕಹಾಲ್ಗಾಂವ್ನ ಉಪ ವಿಭಾಗದ ಗ್ರಾಮವೊಂದರಲ್ಲಿ ನಡೆದಿದೆ. ನಲಂದಾದಲ್ಲಿ ನಿಯೋಜಿತನಾಗಿದ್ದ ಕಾನ್ಸ್ಟೆಬಲ್ ಉದಯ್ ಕುಮಾರ್ ನನ್ನು ಮದ್ಯಪಾನ ವಿರೋಧಿ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ಬಿಹಾರದಲ್ಲಿ 2016 ಎಪ್ರಿಲ್ 5ರಿಂದ ಮದ್ಯಪಾನ ಮಾರಾಟ, ಬಳಕೆ ಹಾಗೂ ದಾಸ್ತಾನು ನಿಷೇಧಿಸಲಾಗಿದೆ. ವರ ಮದ್ಯಪಾನ ಮಾಡಿ ಆಗಮಿಸಿರುವುದರಿಂದ ಹಾಗೂ ಮತ್ತನಾಗಿ ಕೆಲವು ಸದಸ್ಯರೊಂದಿಗೆ ಜಗಳ ಮಾಡಿದ ಹಿನ್ನೆಲೆಯಲ್ಲಿ ವಧು ಆತನನನ್ನು ವಿವಾಹವಾಗಲು ನಿರಾಕರಿಸಿದ್ದಾಳೆ. ಭವಿಷ್ಯದಲ್ಲಿ ಸಮಸ್ಯೆ ಎದುರಿಸದೇ ಇರಲು ಅವಳು ಉದಯ್ನನ್ನು ವಿವಾಹವಾಗುವ ನಿರ್ಧಾರವನ್ನು ಕೈಬಿಟ್ಟಿದ್ದಾಳೆ. ಮದ್ಯಪಾನದ ಚಟವುಳ್ಳ ವ್ಯಕ್ತಿಯೊಂದಿಗೆ ಆಕೆಗೆ ಬದುಕು ಸಾಗಿಸಲು ಸಾಧ್ಯವಾಗಲಾರದು. ಆದಕ್ಕೆ ಆತನನ್ನು ನಿರಾಕರಿಸಿದ್ದಾಳೆ ಎಂದು ವಧುವಿನ ಕುಟುಂಬದ ಸದಸ್ಯರು ಹೇಳಿದ್ದಾರೆ.
Next Story