ಜ. 26ರಂದು ‘ಪಾಸ್ಪೋರ್ಟ್’ ಕೊಂಕಣಿ ಚಿತ್ರ ಬಿಡುಗಡೆ
ಉಡುಪಿ, ಜ.21: ‘ಕ್ರಿಸ್ತ ಜ್ಯೋತಿ’ ಸಿನೆ ಕ್ರಿಯೇಷನ್ಸ್ರವರ ಚೊಚ್ಚಲ ಕೊಂಕಣಿ ಚಲನಚಿತ್ರ ‘ಪಾಸ್ಪೋರ್ಟ್’ ಜ.26ರಂದು ಶಂಕರಪುರ ಸಂತ ಯೋಹಾನರ ದೇವಾಲಯದ ಸಭಾಭವನದಲ್ಲಿ ಸಂಜೆ 6ಗಂಟೆಗೆ ಬಿಡುಗಡೆ ಗೊಳ್ಳಲಿದೆ.
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಚಿತ್ರದ ಲೋಕರ್ಪಣೆ ಮಾಡಲಿದ್ದು, ನಂತರ ಚಿತ್ರದ ಮೊದಲ ಪ್ರದರ್ಶನ ನಡೆಯಲಿದೆ. ಧರ್ಮಪ್ರಾಂತದ ಜ್ಯೇಷ್ಟ ಗುರು ಅ.ವಂ.ಬ್ಯಾಪ್ಟಿಸ್ಟ್ ಮಿನೇಜಸ್, ವಂ.ಡೇನಿಸ್ ಡೆಸಾ ಭಾಗವಹಿಸಲಿರುವರು.
ಸುಮಾರು ಒಂದು ತಿಂಗಳ ಕಾಲ ಉಡುಪಿ ಪರಿಸರದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನಪ್ರಿಯ ವಾಗಿವೆ. ಚಿತ್ರಕ್ಕೆ ವಿನೋದ್ ಗಂಗೊಳ್ಳಿ ನಿರ್ದೇಶನ ಹಾಗೂ ಪ್ರಜೋತ್ ಡೇಸಾ ಸಂಗೀತ ನಿರ್ದೇಶನ ನೀಡಿದ್ದು, 40ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆಂದು ಚಿತ್ರಕಥೆ ಹಾಗೂ ನಿರ್ಮಾಪಕ ವಂ.ರೊಯ್ಸನ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story