Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ರಿಫಾಯಿಯ್ಯಾ ದಫ್ಫ್ ಕಮಿಟಿ ಪಕ್ಕಲಡ್ಕ...

ರಿಫಾಯಿಯ್ಯಾ ದಫ್ಫ್ ಕಮಿಟಿ ಪಕ್ಕಲಡ್ಕ ವಾರ್ಷಿಕೋತ್ಸವ, ಸರಳ ವಿವಾಹ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ21 Jan 2019 9:50 PM IST
share
ರಿಫಾಯಿಯ್ಯಾ ದಫ್ಫ್ ಕಮಿಟಿ ಪಕ್ಕಲಡ್ಕ ವಾರ್ಷಿಕೋತ್ಸವ, ಸರಳ ವಿವಾಹ ಕಾರ್ಯಕ್ರಮ

ಮಂಗಳೂರು, ಜ. 21: ಜಮಾಅತ್ ಪರಿಸರದಲ್ಲಿ ಇರುವ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಮದುವೆಯಾಗಲು ಸಹಾಯ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಇಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ಅವರು ರಿಫಾಯಿಯ್ಯಾ ದಫ್ಫ್ ಕಮಿಟಿ ಪಕ್ಕಲಡ್ಕ ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ  ಬಜಾಲ್ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಅಯೋಜಿಸಿದ 2 ಜೋಡಿಯ ಸರಳ ವಿವಾಹ ಕಾರ್ಯಕ್ರಮದ ನಿಖಾಹ್ ನೆರವೇರಿಸಿ ಮಾತನಾಡಿದರು.

ಪ್ರತಿಯೊಂದು ಜಮಾಅತ್‍ಗಳಲ್ಲಿ ಸಂಘ ಸಂಸ್ಥೆಗಳ ಸಹಕಾರದಿಂದ ಬಡ ಹೆಣ್ಣು ಮಕ್ಕಳ ವಿವಾಹ ಮಾಡುವ ಜವಾಬ್ದಾರಿ ವಹಿಸಿದಾಗ  , ಬಡ ಹೆತ್ತವರು ಮದುವೆ ಸಹಾಯಕ್ಕಾಗಿ ಬೇಡುವ ಪರಿಸ್ಥಿತಿ ದೂರವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಇಹ್ಸಾನ್ ಕರ್ನಾಟಕ ಕನ್‍ವೀನರ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ  ಮಾತನಾಡಿ,  ರಿಫಾಯಿಯ್ಯಾ ದಫ್ಫ್ ಕಮಿಟಿ 14 ವರ್ಷ ಗಳಿಂದ ಉತ್ತಮ ಸಮಾಜಸೇವೆ  ಮಾಡುತ್ತಾ  ಬಂದಿದೆ. ಇಂತಹ ಸಮಾಜಮುಖಿ ಸಂಘಟನೆಗಳು ಪ್ರತಿ ಊರಿನಲ್ಲಿ ಅಗತ್ಯವಿದೆ.  ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಕಮಿಟಿ ಇತರೆ ಸಂಘಟನೆಗಳಿಗೆ ಮಾದರಿ ಎಂದರು.

ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಸಿಹಾಬುದ್ದೀನ್ ತಂಙಳ್ ತಲಕ್ಕಿ ನಿಖಾಹ್ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್ ಇವರ ಹೆಸರಿನಲ್ಲಿ ತಹಲ್ಲೀಲ್ ಸರ್ಮಾಪಿಸಲಾಯಿತು. ರಿಫಾಯಿಯ್ಯಾ ದಫ್ಫ್ ಕಮಿಟಿಯ ಅಧ್ಯಕ್ಷ ಝೈನುದ್ಧೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ತಾಜುಲ್ ಉಲಮಾ ಎಜ್ಯುಕೇಶನ್ ಅಧ್ಯಕ್ಷ ಸಿಹಾಬುದ್ದೀನ್ ತಂಙಳ್ ತಲಕ್ಕಿ ಹಾಗೂ ಮಾಜಿ ಕಾರ್ಪೊರೇಟ್ ವಿಶ್ವನಾಥ್ ಸೇವಾದಳ ಪಕ್ಕಲಡ್ಕ, ರಿಫಾಯಿಯ್ಯಾ ದಫ್ಫ್ ಕಮಿಟಿಯ ಅಧ್ಯಕ್ಷ ಝೈನುದ್ಧೀನ್ ರವರನ್ನು ಸನ್ಮಾನಿಸಲಾಯಿತು.

ಈ ವೇಳೆ ಈಸಾ ಕೋಯ ತಂಙಳ್ ಎಕ್ಕೂರು, ಅಸ್ಸುಫ್ಸ ಫೌಂಡೇಶನ್ ನ ಅಧ್ಯಕ್ಷ ಮುಹಮ್ಮದ್ ರಶೀದ್ ಸಅದಿ, ಉಮರ್ ಸಖಾಫಿ ಕಲ್ಮಿಂಜೆ, ಯೂಸುಫ್ ಕಾಮಿಲ್ ಸಖಾಫಿ ಬನಾರಿ, ಪಕ್ಕಲಡ್ಕ ಮದ್ರಸ ಮುಹಲ್ಲೀಂಗಳಾದ  ಹಾರಿಸ್ ಅಶ್ರಫಿ, ಮುಹಿಯ್ಯುದ್ದೀನ್ ಮುಸ್ಲಿಯಾರ್, ದ.ಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಸ್ಥಳೀಯ ಕಾಪೆರ್Çರೇಟರ್ ಟಿ.ಪ್ರವೀಣ್ ಚಂದ್ರ ಆಳ್ವ,  ಶಾಫಿ ನರ್ಸಿಂಗ್ ಹೋಮ್ ನ ನಿರ್ದೇಶಕ ಡಾ.ಝೈನುದ್ಧೀನ್, ಅಬೂಬಕ್ಕರ್ ಎಂ.ಡಿ, ಮುಹೀಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೆ.ಎಂ.ಪಿ, ಪಕ್ಕಲಡ್ಕ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ, ಮುಹೀಯದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಅನ್ವರ್ ಎಸ್.ಎ.ಎಸ್, ರಿಫಾಯಿಯ್ಯಾ ದಫ್ಫ್ ಕಮಿಟಿಯ ಸಂಚಾಲಕ ನೂರುದ್ದೀನ್, ಕಾರ್ಯದರ್ಶಿ ಸಬೀರ್ ಅಹ್ಮದ್, ಕೋಶಾಧಿಕಾರಿ ಯಕೂಬ್, ಸದಸ್ಯರಾದ ಮಜೀದ್ ಸಅದಿ, ಹುಸೈನ್, ಮೊಹಮ್ಮದ್ ಇರ್ಫಾನ್, ಇನ್ಸಾರ್, ಮುಹಿನುದ್ದೀನ್ ಉಪಸ್ಥಿತರಿದ್ದರು.

ಇರ್ಷಾದ್ ಕೋಡಿ ಕಾರ್ಯಕ್ರಮ ನಿರೂಪಿಸಿದರು. ಪಕ್ಕಲಡ್ಕ ಮದ್ರಸ ಸದರ್ ಮುಹಲ್ಲೀಂ ಮುಹಮ್ಮದ್ ಅನ್ವರ್ ಅಝ್ಹ್‍ರಿ ಸ್ವಾಗತಿಸಿದರು. ರಿಫಾಯಿಯ್ಯಾ ದಫ್ಫ್ ಕಮಿಟಿಯ ಮುಹಮ್ಮದ್ ಅನೀಸ್ ವಂದಿಸಿದರು.

ಊಟ ಬಡಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಸಮಾರಂಭದಲ್ಲಿ ಭಾಗವಹಿಸಿದ್ದ ವಧುವರರ ಸಂಂಬಂಧಿಕರು ಹಾಗೂ ಹೆತ್ತವರಿಗೆ ಊಟವನ್ನು ಬಡಿಸಿದರು.

ಬಳಿಕ ಮಾತನಾಡಿ ಅವರು 'ಆಧುನಿಕ ಸಮಯದಲ್ಲಿ ಯಾರಿಗೂ ಪುರುಸೊತ್ತಿಲ್ಲ. ಅದರ ನಡುವೆಯೂ ಯುವಕರು ಸಂಘಟಿತರಾಗಿ ಬಡವರ ಕಣ್ಣೀರು ಒರೆಸುವ ಕಾರ್ಯ ಶ್ಲಾಘನೀಯ. ಇದು ಅನ್ಯ ಸಮುದಾಯ, ಸಂಘಟನೆಯವರಿಗೆ ಮಾದರಿಯಾದ ಕಾರ್ಯಕ್ರಮ. ಇವರ ಜೊತೆಗೆ ಕಿಂಚಿತ್ತಾದರೂ ಕೈಜೋಡಿಸುವುದು ಮಹತ್ತರ ಕಾರ್ಯ' ಎಂದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X