Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಒಂದೇ ದಿನ 25 ಬಾರಿ ಹೃದಯಾಘಾತವಾದರೂ...

ಒಂದೇ ದಿನ 25 ಬಾರಿ ಹೃದಯಾಘಾತವಾದರೂ ಬದುಕುಳಿದ ಮಗು!

ವಾರ್ತಾಭಾರತಿವಾರ್ತಾಭಾರತಿ21 Jan 2019 9:57 PM IST
share
ಒಂದೇ ದಿನ 25 ಬಾರಿ ಹೃದಯಾಘಾತವಾದರೂ ಬದುಕುಳಿದ ಮಗು!

ಲಂಡನ್, ಜ.21: ಒಂದೇ ದಿನದಲ್ಲಿ 25 ಬಾರಿ ಹೃದಯಾಘಾತವಾದರೂ ಪವಾಡಸದೃಶವೆಂಬಂತೆ  ಬದುಕುಳಿದಿದ್ದಾನೆ ಕೇವಲ 19 ತಿಂಗಳು ವಯಸ್ಸಿನ ಥಿಯೋ ಫ್ರೈ. ಆತನನ್ನು ಇಗ ಎಲ್ಲರೂ ‘ಮಿರಾಕಲ್ ಬೇಬಿ’ ಎಂದೇ ಕರೆಯುತ್ತಿದ್ದು 24 ಗಂಟೆಗಳಲ್ಲಿ ಇಲ್ಲಿಯ ತನಕ ಇಷ್ಟೊಂದು ಸಂಖ್ಯೆಯ ಹೃದಯಾಘಾತ ಸಂಭವಿಸಿ ಬದುಕಿದವರು ಯಾರೂ ಇಲ್ಲ ಎಂದು ವೈದ್ಯರು ಹೇಳುತ್ತಾರೆ.

ಈ ಪುಟ್ಟ ಮಗುವಿಗೆ ಒಂದು ವರ್ಷವಾಗುವಷ್ಟರಲ್ಲಿಯೇ 17 ಶಸ್ತ್ರಚಿಕಿತ್ಸೆಗಳು ನಡೆದಿವೆ ಹಾಗೂ ಡಜನುಗಟ್ಟಲೆ ಬಾರಿ ಹೃದಯಾಘಾತವಾಗಿದೆ. ಆದರೂ ಮಗು ಚೇತರಿಸಿಕೊಂಡು ಉಲ್ಲಾಸಭರಿತವಾಗಿರುವುದು ವೈದ್ಯಲೋಕಕ್ಕೂ ಅಚ್ಚರಿಯುಂಟು ಮಾಡಿದೆ. ಥಿಯೋ ಬದುಕುಳಿಯುವುದಿಲ್ಲವೆಂದು ಎಲ್ಲರೂ ಅಂದುಕೊಂಡಿದ್ದರೂ ಆತ ಎಲ್ಲರ ಪ್ರೀತಿ ಹಾಗೂ ಹಾರೈಕೆಗಳೊಂದಿಗೆ ಗುಣಮುಖನಾಗುತ್ತಿದ್ದಾನೆಂದು ಆತನ ತಾಯಿ ಫಾವೆ ಸೈಯರ್ಸ್ ಹೇಳುತ್ತಾರೆ.

ಥಿಯೋ ಫ್ರೈ ಹುಟ್ಟಿ ಕೇವಲ ಎಂಟು ದಿನಗಳಾಗುವಷ್ಟರಲ್ಲಿಯೇ ಸಮಸ್ಯೆಗಳು ಆರಂಭಗೊಂಡಿದ್ದವೆಂದು ಆತನ ತಂದೆ ಸ್ಟೀವನ್ ಫ್ರೈ ಮತ್ತು ತಾಯಿ ಹೇಳುತ್ತಾರೆ. ಮಗು ಒಮ್ಮೆಗೇ ಅತಿಯಾಗಿ ನಿದ್ದೆ ಮಾಡುತ್ತಿದ್ದ, ನಂತರ ಆತನ ದೇಹದ ಬಣ್ಣ ನೀಲಿ ಮತ್ತು ಬೂದಿ ಬಣ್ಣಕ್ಕೆ ತಿರುಗಿತ್ತು. ನಂತರ ಆತನನ್ನು ಸಾಲ್ಫೋರ್ಡ್ ರಾಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನು ನೋಡಿ ವೈದ್ಯರೇ ಆಘಾತಗೊಂಡಿದ್ದರು, ಏನಾಗಿತ್ತೆಂದು ಅವರಿಗೂ ತಿಳಿದಿರಲಿಲ್ಲ. ಆದರೆ ಆತನ ಸ್ಥಿತಿ ಗಂಭೀರವಾಗಿದೆ ಎಂದಷ್ಟೇ ಅವರು ತಿಳಿಸಿದ್ದರು. ನಂತರ ತಪಾಸಣೆಯ ಬಳಿಕ ಮಗುವಿಗೆ ಹೃದಯ ವೈಫಲ್ಯವಾಗಿದೆ. ಶಸ್ತ್ರಚಿಕಿತ್ಸೆ ನಡೆಸದೇ ಇದ್ದರೆ ಮಗು ಬದುಕುಳಿಯುವುದಿಲ್ಲ ಎಂದೂ ಹೇಳಿದ್ದರು.

ಮಗುವನ್ನು ನಂತರ ಲಿವರ್ ಪೂಲ್ ನಲ್ಲಿರುವ ಮಕ್ಕಳ ಆಸ್ಪತ್ರೆಗೆ ಸೇರಿಸಲಾಗಿತ್ತು ಆಗ ಥಿಯೋ ಹೃದಯ ಬಡಿತ ಮಿತಿಮೀರಿತ್ತಲ್ಲದೆ ರಕ್ತದೊತ್ತಡದಲ್ಲೂ ಭಾರೀ ಏರಿಳಿತವಾಗಿತ್ತು. ವೈದ್ಯರ ಸತತ ಪ್ರಯತ್ನದ ಬಳಿಕ ಮಗು ಸುಧಾರಿಸಿಕೊಂಡ ನಂತರ ನಾಲ್ಕು ದಿನಗಳ ತರುವಾಯ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಮಗುವಿಗೆ ಇನ್ನೆರಡು ಬಾರಿ ಹೃದಯಾಘಾತವಾಗಿತ್ತು. ನಂತರ ಆತನಿಗೆ ಸೆಪ್ಸಿಸ್ ಸೋಂಕು ತಗಲಿ ಮತ್ತಷ್ಟು ಸಮಸ್ಯೆಯಾಗಿತ್ತು. ಆರು ತಿಂಗಳು ಮಗು ಆಸ್ಪತ್ರೆಯಲ್ಲಿರಬೇಕಾಯಿತು. ಡಿಸೆಂಬರ್ 21,ರಂದು ಥಿಯೋಗೆ ಮತ್ತೊಮ್ಮೆ ಹೃದಯಾಘಾತವಾಗಿತ್ತಲ್ಲದೆ ಆತನ ಹೃದಯ ಬಡಿತ 12 ನಿಮಿಷಗಳ ಕಾಲ ನಿಂತು ಹೋಗಿತ್ತು. ಮುಂದೆ ಜನವರಿ 31ರಂದು ಆತನಿಗೆ 25 ಬಾರಿ ಹೃದಯಾಘಾತವಾಗಿತ್ತು.

ಮತ್ತೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಥಿಯೋಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ ರಮಣ ಧನ್ನಪುನೇನಿ ಆತನ ಎಡ ಕುಹರದಲ್ಲಿ  (ಲೆಫ್ಟ್ ವೆಂಟ್ರಿಕಲ್) ಸ್ಕಾರ್ ಟಿಶ್ಯೂ ಇರುವುದನ್ನು ಪತ್ತೆ ಹಚ್ಚಿದ್ದು ಇದರಿಂದಾಗಿಯೇ ಸಮಸ್ಯೆಯಿದೆ ಎಂದು ತಿಳಿದು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಈಗ  ಥಿಯೋ ಸಂಪೂರ್ಣ ಗುಣಮುಖನಾಗುತ್ತಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X