85 ಕೆಜಿ ತೂಕದ ಈ ವಿಶೇಷ ಮೀನಿಗೆ ಭಾರೀ ಬೇಡಿಕೆ

ಬೆಂಗಳೂರು, ಜ.21: ನಗರದ ಫ್ರೇಜರ್ ಟೌನ್‌ನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಬರೋಬ್ಬರಿ 85 ಕೆಜಿ ತೂಕದ ವಿಶೇಷ ಮೀನು ಮಾರಾಟಕ್ಕಿಡಲಾಗಿತ್ತು. ನೂರಾರು ಜನರು ಇದನ್ನು ನೋಡಿ ಆಶ್ಚರ್ಯಪಟ್ಟರು.
ಎಲ್ಲೋಫಿನ್ ಟ್ಯೂನಾ ಎಂಬ ಹೆಸರಿನ ಈ ಮೀನಿಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾದ ಬೇಡಿಕೆಯನ್ನು ಹೊಂದಿದೆ. ಅದನ್ನು ಇಲ್ಲಿನ ಮೀನಿನ ವ್ಯಾಪಾರಿ ಮುಹಮ್ಮದ್ ವಾಸಿಂ ಎಂಬವರು ಚೆನ್ನೈನಿಂದ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.
ಈ ಮೀನು ಸೇವಿಸಿದರೆ ಮನುಷ್ಯನ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ ಎಂಬ ಮಾತಿದೆ. ಅಲ್ಲದೆ, ಈ ಮೀನಿನಲ್ಲಿ ಯಾವುದೇ ಕೊಬ್ಬಿನ ಅಂಶ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇದಕ್ಕೆ ಹೆಚ್ಚು ಬೇಡಿಕೆಯಿದ್ದು, ಸದ್ಯ ಕೆಜಿ ಗೆ 500 ರೂ. ನಂತೆ ಈ ಮೀನಿ ಮಾಂಸ ಮಾರಾಟ ಮಾಡಲಾಗುತ್ತಿದೆ.






.jpg)

