Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಜೈಲು ಪಾಲಾಗಿದ್ದ ಯುವಕ ನಾಲ್ಕು ಪದವಿ...

ಜೈಲು ಪಾಲಾಗಿದ್ದ ಯುವಕ ನಾಲ್ಕು ಪದವಿ ಪಡೆದು ಹೊರಬಂದ !

ಅಪರಾಧ ಲೋಕಕ್ಕೆ ಕಾಲಿಟ್ಟವನ ಬದುಕು ಬದಲಿಸಿದ ಸೆರೆಮನೆ

ವಾರ್ತಾಭಾರತಿವಾರ್ತಾಭಾರತಿ22 Jan 2019 8:02 PM IST
share
ಜೈಲು ಪಾಲಾಗಿದ್ದ ಯುವಕ ನಾಲ್ಕು ಪದವಿ ಪಡೆದು ಹೊರಬಂದ !

ಬೆಂಗಳೂರು, ಜ.22: "ಅಪರಾಧ ಲೋಕದ ಕಡೆಗೆ ಬಹುಬೇಗ ಆಕರ್ಷಿತರಾಗುವ ಯುವ ಸಮೂಹವನ್ನು ಅತ್ತ ಕಡೆಗೆ ತಲೆ ಹಾಕದಂತೆ ನನ್ನ ಲೇಖನಗಳು ಹಾಗೂ ಉಪನ್ಯಾಸಗಳ ಮೂಲಕ ತಿದ್ದಬೇಕು ಎನ್ನುವುದೇ ನನ್ನ ಜೀವನದ ಗುರಿ" ಎಂಬುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ನಿವಾಸಿ ಯಲ್ಲಪ್ಪ ಅವರ ಮನದಾಳದ ಮಾತು. 

ಜೈಲಿನಲ್ಲಿ ಇದ್ದುಕೊಂಡೇ ಎರಡು ಪದವಿ ಹಾಗೂ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ಕೈದಿ ಎಂಬ ಹೆಗ್ಗಳಿಕೆಯೊಂದಿಗೆ ಕಳೆದ ಗಣರಾಜ್ಯೋತ್ಸವ ದಿನದಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಯಲ್ಲಪ್ಪ ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ. ತಮ್ಮನ್ನು ಅಪರಾಧಿ ಎಂದು ಎಲ್ಲಿ ಬಂಧಿಸಲಾಗಿತ್ತೋ ಅದೇ ಜಾಗದಲ್ಲಿ ತಾವೇ ಖುದ್ದಾಗಿ ಬರೆದಿರುವ ಪುಸ್ತಕವೊಂದನ್ನು ಬಿಡುಗಡೆಗೊಳಿಸಿದ್ದಾರೆ.

ತನ್ನೊಂದಿಗೆ ಇದ್ದ ಜೈಲುವಾಸಿಗಳ ಕುರಿತು ಪುಸ್ತಕ ಬರೆದಿರುವ 38 ವರ್ಷದ ಯಲ್ಲಪ್ಪ ಅವರ ಬದುಕು ಸಿನಿಮಾವೊಂದರ ಕಥೆಯಂತೆಯೇ ಇದೆ. ದೊಡ್ಡಬಳ್ಳಾಪುರ ನಗರದ ತಿಗಳರಪೇಟೆ ನಿವಾಸಿಯಾಗಿದ್ದ ಯಲ್ಲಪ್ಪ ಮನೆಯ ಬಡತನದ ಕಾರಣ 7ನೆ ತರಗತಿಗೇ ಶಾಲೆ ಬಿಟ್ಟವರು. ಹಾಗಿದ್ದೂ ಸದೃಢನಾಗಿದ್ದ ಯಲ್ಲಪ್ಪ ಕಬಡ್ಡಿ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದರು. 2004ರಲ್ಲಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ನೋಡಲು ತೆರಳಿದ್ದ ಯಲ್ಲಪ್ಪ ಜೊತೆಗೆ ಸ್ಥಳೀಯ ಗಿರಿಬಾಬು ಎಂಬಾತನೊಂದಿಗೆ ಜಗಳವಾಗಿತ್ತು.

ಜಗಳ ವಿಕೋಪಕ್ಕೆ ಹೋಗಿ ಗಿರಿಬಾಬು ಮಚ್ಚಿನಿಂದ ಹಲ್ಲೆ ಮಾಡಿದ್ದ. ಆದರೆ ಅದೇ ಮಚ್ಚು ಯಲ್ಲಪ್ಪ ಕೈ ಸೇರಿ ಆವೇಶದಲ್ಲಿ ಕೊಲೆ ನಡೆದುಹೋಗಿತ್ತು. ಪರಿಣಾಮ ಯಲ್ಲಪ್ಪನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಆ ಬಳಿಕ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಹೀಗೆ ತನ್ನದಲ್ಲದ ತಪ್ಪಿಗೆ, ಆವೇಶಕ್ಕೆ ಒಳಗಾಗಿ ಹತ್ಯೆ ಮಾಡಿ ಜೈಲು ಸೇರಿದ ಯಲ್ಲಪ್ಪ ಬರೋಬ್ಬರಿ 14.8 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂತು.

ಇದರ ನಡುವೆ ತನ್ನೊಟ್ಟಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಹಾಗೂ ಬಿಎಸ್ಸಿ ಅರ್ಧಕ್ಕೆ ಬಿಟ್ಟಿದ್ದ ಹುಡುಗನೊಬ್ಬ ಜೈಲಿನಲ್ಲಿ ಪರೀಕ್ಷೆ ತೆಗೆದುಕೊಳ್ಳುವುದನ್ನು ಕಂಡು ಯಲ್ಲಪ್ಪನಿಗೂ ಓದುವ ಆಸೆಯಾಯಿತು. ಆದರೆ 7ನೆ ತರಗತಿ ಓದಿದ್ದ ಯಲ್ಲಪ್ಪನಿಗೆ ಏನು ಓದಬೇಕೆಂದೇ ತಿಳಿದಿರಲಿಲ್ಲ. ಕೊನೆಗೆ ಬೆಂಗಳೂರು ವಿವಿ ದೂರ ಶಿಕ್ಷಣದಲ್ಲಿ ಬಿಎ ಓದಲು ಅವಕಾಶ ನೀಡಿತು. ಅದರಂತೆ ನೇರವಾಗಿ ಬಿಎ ಸೇರಿದ ಯಲ್ಲಪ್ಪ ಒಂದೇ ಬಾರಿಗೆ ಪರೀಕ್ಷೆ ಪಾಸು ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ಅದಾದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಯಲ್ಲಪ್ಪ, ಜೈಲಿನಲ್ಲಿ ಇದ್ದುಕೊಂಡೇ ನಾಲ್ಕು ಪದವಿ ಪಡೆದರು. ಆ ಬಳಿಕ ಮನಪರಿವರ್ತನೆಗೊಂಡ ಇತರ ಕೈದಿಗಳಿಗೆ ಶಿಕ್ಷಣ ಮುಂದುವರೆಸಲು ನೆರವು ನೀಡಿ ಅಧಿಕಾರಿಗಳ ಮೆಚ್ಚುಗೆ ಗಳಿಸಿದರು.

ಇವೆಲ್ಲವೂ ಆದ ಬಳಿಕ ಸೆರೆವಾಸಿಗಳ ಮನ ಪರಿವರ್ತನೆಯಲ್ಲಿ ಜೈಲು ಅಧಿಕಾರಿಗಳ ಪಾತ್ರ ವಿಚಾರದಲ್ಲಿ ಪಿಎಚ್.ಡಿ ಪಡೆಯಲು ಮುಂದಾದ ಯಲ್ಲಪ್ಪ ಜೈಲು ಅಧಿಕಾರಿಗಳ ಅನುಮತಿ ಪಡೆದು ರಾಜ್ಯದ ಇತರೆಡೆ ಇರುವ ಬಳ್ಳಾರಿ, ಬೆಳಗಾವಿ, ಮೈಸೂರು, ಕೋರಮಂಗಲ ಸೇರಿದಂತೆ ಒಟ್ಟು 8 ಸೆಂಟ್ರಲ್ ಜೈಲುಗಳಿಗೆ ಭೇಟಿ ನೀಡಿ ಅಲ್ಲೇ ಕೆಲ ಕಾಲ ಇದ್ದು ಅಧ್ಯಯನ ನಡೆಸಿ ಬಂದಿದ್ದಾರೆ. ಇದೀಗ ಅದೇ ವಿಚಾರದಲ್ಲಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆಯುವ ಕನಸು ನನಸಾಗಿಸುವ ಪ್ರಯತ್ನದಲ್ಲಿದ್ದಾರೆ.

ಅಪರಾಧ ಲೋಕದ ಕಡೆಗೆ ಬಹಳ ಬೇಗ ಆಕರ್ಷಣೆಗೆ ಒಳಗಾಗುವ ಯುವ ಸಮೂಹಕ್ಕೆ ಎಚ್ಚರಿಕೆ ಸಂದೇಶ ನೀಡುವಂತಹ ನೈಜ ಕಥೆಗಳುಳ್ಳ ಮತ್ತೊಂದು ಪುಸ್ತಕದ ಸಿದ್ಧತೆಯಲ್ಲಿ ಇವರು ತೊಡಗಿದ್ದಾರೆ. ಸಮಾಜ, ಕುಟುಂಬ ಎಂದಿಗೂ ನಮ್ಮನ್ನು ಜೈಲಿಗೆ ಹೋಗಿ ಬಂದವರು ಎಂಬ ಮನಸ್ಥಿತಿಯಲ್ಲೇ ನೋಡುವುದರಿಂದ ಮದುವೆಯಾಗುವ ಆಲೋಚನೆಯನ್ನೇ ಕೈಬಿಟ್ಟಿದ್ದೇನೆ ಎನ್ನುವ ಯಲ್ಲಪ್ಪ ಉಪನ್ಯಾಸಕನಾಗುವ ಮೂಲಕ ಯುವಕರನ್ನು ತಿದ್ದುವ ಪ್ರಯತ್ನ ಮಾಡಬೇಕಿದೆ ಎನ್ನುತ್ತಾರೆ.

ಅನಿರೀಕ್ಷಿತ ಘಟನೆಗಳಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ 8 ಮಂದಿಯ ಬದುಕಿನ ನೈಜ ಘಟನೆಗಳನ್ನು ಪುಸ್ತಕದ ರೂಪದಲ್ಲಿ ಹೊರ ತರುತ್ತಿದ್ದಾರೆ. ಕೊಲೆಗಾರ ಎನಿಸಿಕೊಂಡು ಜೈಲು ಸೇರಿದ್ದ ಯಲ್ಲಪ್ಪ ಇಂದು ’ಜೈಲು ಜೀವಗಳು’ ಎಂಬ 200 ಪುಟಗಳ ಪುಸ್ತಕದ ಲೇಖಕರಾಗಿದ್ದಾರೆ. ಕೆಟ್ಟ ಗಳಿಗೆಯಲ್ಲಿ ಆವೇಶಕ್ಕೆ ಒಳಗಾಗಿ, ಮುಂದಾಗುವ ಅನಾಹುತಗಳ ಅರಿವಿಲ್ಲದೆ ಅಪರಾಧ ಎಸಗುವ ಜನರಿಗೆ ಎಚ್ಚರಿಕೆಯ ಸಂದೇಶವಾಗಿ ಪುಸ್ತಕವನ್ನು ರೂಪಿಸಿದ್ದೇನೆ ಎನ್ನುವ ಯಲ್ಲಪ್ಪ, ನನ್ನ ಬರವಣಿಗೆಯ ಧ್ಯೇಯ ಅಪರಾಧ ಲೋಕದ ಕಡೆಗೆ ಆಕರ್ಷಿತರಾಗುವ ಯುವ ಸಮೂಹವನ್ನು ಎಚ್ಚರಿಸುವುದಷ್ಟೇ ಎಂದು ಅಭಿಪ್ರಾಯಪಡುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X