ಸಂಜಿತಾ ಚಾನು ವಿರುದ್ಧ ತಾತ್ಕಾಲಿಕ ನಿಷೇಧ ಹಿಂಪಡೆದ ಐಡಬ್ಲುಎಫ್
ಹೊಸದಿಲ್ಲಿ, ಜ.23: ಭಾರತದ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಕೆ.ಸಂಜಿತಾ ಚಾನು ಅವರ ವಿರುದ್ಧ ಅಂತರ್ರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಶನ್(ಐಡಬ್ಲುಎಫ್)ವಿಧಿಸಿದ್ದ ನಿಷೇಧವನ್ನು ಬುಧವಾರ ಹಿಂದಕ್ಕೆ ಪಡೆದಿದೆ.
ಈ ಬೆಳವಣಿಗೆ ಕುರಿತು ಐಡಬ್ಲುಎಫ್ ಭಾರತದ ವೇಟ್ಲಿಫ್ಟಿಂಗ್ ಫೆಡರೇಶನ್ ಹಾಗೂ ಸಂಜಿತಾರಿಗೆ ಮಾಹಿತಿ ನೀಡಿದೆ.
ಗೋಲ್ಡ್ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಸಂಜಿತಾರಿಂದ ವಿಶ್ವ ಚಾಂಪಿಯನ್ಶಿಪ್ಗೆ ಮೊದಲು ಸಂಗ್ರಹಿಸಲಾಗಿದ್ದ ಮೂತ್ರ ಮಾದರಿಯಲ್ಲಿ ನಿಷೇಧಿತ ದ್ರವ್ಯ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ 25ರ ಹರೆಯದ ಚಾನುವಿಗೆ ಕಳೆದ ವರ್ಷ ಮೇನಲ್ಲಿ ತಾತ್ಕಾಲಿಕ ನಿಷೇಧ ಹೇರಲಾಗಿತ್ತು.
Next Story