ಐಸಿಸ್ ಜೊತೆ ಸಂಪರ್ಕ ಆರೋಪ: ಅಪ್ರಾಪ್ತ ಸೇರಿ 9 ಮಂದಿಯ ಬಂಧನ

ಹೊಸದಿಲ್ಲಿ, ಜ.23: ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರದ ಮುಂಬ್ರಾ, ಥಾಣೆ ಹಾಗು ಔರಂಗಬಾದ್ ನಲ್ಲಿ ದಾಳಿ ನಡೆಸಿದ ಮಹಾರಾಷ್ಟ್ರ ಎಟಿಎಸ್ ಓರ್ವ ಅಪ್ರಾಪ್ತ ಸೇರಿ 9 ಮಂದಿಯನ್ನು ಬಂಧಿಸಿದೆ.
ಬಂಧಿತರನ್ನು ಸಲ್ಮಾನ್ ಖಾನ್, ಫಹದ್ ಶಾ, ಝಮೀನ್ ಕುಟೆಪಾಡಿ, ಮೊಹ್ಸೀನ್ ಖಾನ್, ಮುಹಮ್ಮದ್ ಮಝರ್ ಶೇಖ್, ತಾಕಿ ಖಾನ್, ಸರ್ಫ್ರಾಝ್ ಅಹ್ಮದ್, ಝಾಹಿದ್ ಶೇಖ್ ಮತ್ತು ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ‘ಸ್ಲೀಪರ್ ಸೆಲ್’ಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಎಟಿಎಸ್ ಈ ಬಂಧನ ನಡೆಸಿದೆ ಎನ್ನಲಾಗಿದೆ.
Next Story