ಹೊಳೆಯಲ್ಲಿ ಮೀನುಗಾರ ಮೃತ್ಯು
ಗಂಗೊಳ್ಳಿ, ಜ.21: ಅರಾಟೆ ಸೌಪರ್ಣಿಕ ಹೊಳೆಯಲ್ಲಿ ಜ. 21ರಂದು ಸಂಜೆ ಪಾತಿ ದೋಣಿಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಬೆಳ್ಳಾಲ ಗ್ರಾಮದ ಮೂಡುಮುಂದ ನಿವಾಸಿ ಕೃಷ್ಣ ಮೊಗವೀರ (50) ಎಂಬವರ ಮೃತ ದೇಹವು ಜ. 22ರಂದು ಸಂಜೆ ಐದು ಗಂಟೆಗೆ ಅರಾಟೆ ಕಳುವಿನ ಬಾಗಿಲಿನ ಸೌಪರ್ಣಿಕ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





