ಆಕಾಶವಾಣಿ ರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಜಿ.ಎಸ್.ಉಬರಡ್ಕ ಆಯ್ಕೆ

ಮಂಗಳೂರು, ಜ.24: ಗಣರಾಜ್ಯೋತ್ಸವದ ಅಂಗವಾಗಿ ಹೊಸದಿಲ್ಲಿಯ ಆಕಾಶವಾಣಿ ನಿರ್ದೇಶನಾಲಯವು ಜ.10ರಂದು ಚೆನ್ನೈಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡ ಭಾಷೆಯ ಪ್ರತಿನಿಧಿಯಾಗಿ ಕನ್ನಡದ ಕವಿ ಸುಳ್ಯ ತಾಲೂಕಿನ ದೊಡ್ಡತೋಟದ ಜಿ.ಎಸ್. ಉಬರಡ್ಕ ಆಯ್ಕೆಯಾಗಿದ್ದಾರೆ.
ದೇಶದ 22 ಭಾಷೆಗಳ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದ್ದು, ಈ ಎಲ್ಲ ಕವಿತೆಗಳನ್ನು ಆಯಾ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಿ ಪ್ರಸಾರ ಮಾಡುತ್ತವೆ. ಜ.25ರ ರಾತ್ರಿ 10 ಗಂಟೆಯಿಂದ 12 ಗಂಟೆಯವರೆಗೆ ಈ ಕವಿ ಸಮ್ಮೇಳನದ ಧ್ವನಿಮುದ್ರಣವು ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ತಿಳಿಸಿದ್ದಾರೆ.
Next Story





