ಜ.26: ಗಣರಾಜ್ಯೋತ್ಸವದಲ್ಲಿ ಬಹುಭಾಷಾ ಕವಿಗೋಷ್ಠಿ
ಮಂಗಳೂರು, ಜ.24: ಗಣರಾಜ್ಯೋತ್ಸವದ ಅಂಗವಾಗಿ ಜ.26ರಂದು ಅಪರಾಹ್ನ 3 ಗಂಟೆಗೆ ನಗರದ ಪುರಭವನದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಟಿ. ಭಾನುಮತಿ ಅಶೋಕ್‌ನಗರ, ಕೆ.ಎನ್. ಶಿವರಾಮ ಭಟ್ ಮುಡಿಪು, ರಾಜ್ ಅಡೂರು ಕಾಸರಗೋಡು, ಸಾವಿತ್ರಿ ರಮೇಶ್ ಭಟ್ ಸುರತ್ಕಲ್, ಬದ್ರುದ್ದೀನ್ ಕೂಳೂರು (ಕನ್ನಡ), ರಾಜೇಶ್ ಶೆಟ್ಟಿ ದೋಟ ಬಂಗ್ರಕೂಳೂರು, ಎಸ್.ಎಸ್. ಕಾರ್ಕಳ, ಶೈಲಜಾ ಮಂಗಳೂರು (ತುಳು), ರಮ್ಯಾಶ್ರೀ ಸೋಣಂಗೇರಿ ನಡುಮನೆ ಸುಳ್ಯ (ಅರೆಭಾಷೆ), ಪಿ.ಎಸ್. ನಾರಾಯಣ ಭಟ್ ಕೊಲ (ಹವ್ಯಕ), ಪ್ರೇಮ್ ನಾರಾಯಣ ಗುಪ್ತ, ಕೊಡಿಯಾಲ್‌ಬೈಲ್ (ಹಿಂದಿ), ನಾಗರಾಜ ಖಾರ್ವಿ (ಕುಂದಾಪುರ ಕನ್ನಡ), ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು (ಬ್ಯಾರಿ), ಚಾರ್ಲ್ಸ್ ಡಿಸೋಜ ಯೆಯ್ಯ್‌ಡಿ, ಕೀರ್ತನಾ ಕಾಮತ್ (ಕೊಂಕಣಿ), ರಾಘವನ್ ಬೆಳ್ಳಿಪಾಡಿ (ಮಲಯಾಳಂ) ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ.
ಮಧ್ಯಾಹ್ನ ಪೊಲೀಸ್ ಬ್ಯಾಂಡ್‌ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಜರುಗಲಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





