ಜ. 27: ಬಾಂಬಿಲ ರೇಂಜ್ ಮಟ್ಟದ ವಿದ್ಯಾರ್ಥಿ ಫೆಸ್ಟ್
ಮಂಗಳೂರು, ಜ.24: ಬಾಂಬಿಲ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ವತಿಯಿಂದ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ‘ವಿದ್ಯಾರ್ಥಿ ಫೆಸ್ಟ್ 2019’ ಹಾಗೂ ಅಗಲಿದ ಸಮಸ್ತ ನಾಯಕರ ಅನುಸ್ಮರಣಾ ಕಾರ್ಯಕ್ರಮವು ಜ.27ರಂದು ವಗ್ಗದ ಮಅದನುಲ್ ಉಲೂಂ ಮದ್ರಸ ವಠಾರದಲ್ಲಿ ಜರುಗಲಿದೆ.
ಬೆಳಗ್ಗೆ 7ರಿಂದ ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಅಬ್ದುಲ್ ಬಶೀರ್ ಯಮಾನಿ, ಉಸ್ಮಾನ್ ಮುಸ್ಲಿಯಾರ್, ಬಾವಾ ಮುಸ್ಲಿಯಾರ್, ಎ.ಎಂ.ಆದಂ ಮುಸ್ಲಿಯಾರ್, ಇಬ್ರಾಹೀಂ ಫೈಝಿ, ಉಸ್ಮಾನ್ ಮುಸ್ಲಿಯಾರ್ ಬಾಂಬಿಲ, ತ್ವಾಹಾ ವಾಫೀ ಕಣ್ಣೂರು ಕೇರಳ, ಝೈನುದ್ದೀನ್ ಮಖ್ದೂಂ ಅನ್ಸಾರಿ, ಅಬ್ದುಲ್ ರಝಾಕ್ ವೌಲವಿ ಗೇರುಕಟ್ಟೆ, ಪಿ.ಎಂ. ಯಹ್ಯಾ ಮುಸ್ಲಿಯಾರ್ ಮರ್ದಾಳ, ಎಂ. ಎಚ್. ಖಾಸಿಂ ಮುಸ್ಲಿಯಾರ್, ಹಂಝ ದಾರಿಮಿ, ಅಬ್ದುರ್ರಹ್ಮಾನಿ ಬಾಂಬಿಲ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





