ಮಂಗಳೂರು: ತುಳು ಚಿತ್ರೋತ್ಸವದಲ್ಲಿ ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದವರಿಗೆ ಸನ್ಮಾನ

ಮಂಗಳೂರು, ಜ.24: ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದಲ್ಲಿ ಜ. 27ರಂದು ನೆಹರೂ ಮೈದಾನದಲ್ಲಿ ನಡೆಯಲಿರುವ ತುಳು ಚಿತ್ರ ಶತೋತ್ಸವದಲ್ಲಿ ರಾಷ್ಟ್ರ, ರಜ್ಯಾ ಮಟ್ಟದ ಪ್ರಶಸ್ತಿ ಪಡೆದ ತುಳು ಚಿತ್ರ ನಿರ್ಮಾಪಕರು, ನಿರ್ದೇಶಕರು ಹಾಗೂ ಕಾವಿದರನ್ನು ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಗೌರವಾಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಇದೇ ವೇಳೆ ತುಳು ಚಿತ್ರದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿ 100 ಮಂದಿಯನ್ನು ಗಣ್ಯರ ಸಮ್ಮುಖದಲ್ಲಿ ನ್ಮಾನಿಸಲಾಗುವುದು ಎಂದರು.
ಬೆಳಗ್ಗೆ 9.45ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, ಬಳಿಕ 11 ಗಂಟೆಗೆ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರಮಂದಿರ ಮಾಲಕರು, ವ್ಯವಸ್ಥಾಪಕರಿಗೆ ಅಭಿನಂದನೆ ನಡೆಯಲಿದೆ. 12 ಗಂಟೆಗೆ ತುಳುಚಿತ್ರದ ಬೆಳವಣಿಗೆ ಬಗ್ಗೆ ಸಂವಾದ, 2 ಗಂಟೆಗೆ ವಿದ್ಯಾರ್ಥಿಗಳಿಗೆ ಚಿತ್ರರಂಗದ ಬಗ್ಗೆ ರಸಪ್ರಶ್ನೆ, 3 ಗಂಟೆಗೆ ಅಭಿನಂದನಾ ಕಾರ್ಯಕ್ರಮ, 4 ಗಂಟೆಗೆ ತುಳುಚಿತ್ರಗಳ ರಸಮಂಜರಿ, 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 6 ಗಂಟೆಗೆ ತುಳು ಚಿತ್ರ ತಾರೆಯರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
6.30ಕ್ಕೆ ಕರ್ನಾಟಕ ಪ್ರಾದೇಶಿಕ ಚಲನಚಿತ್ರ ನಿರ್ಮಾಪಕರ ಸಂಘದ ಉದ್ಘಾಟನೆ ನಡೆಯಲಿದೆ. 7 ಗಂಟೆಗೆ ಸಮಾರೋಪ ಸಮಾರಂಭ ನೆಯಲಿದೆ ಎಂದು ಅವರು ವಿವರಿಸಿದರು. ಹಿಂದೆಲ್ಲಾ ವರ್ಷಕ್ಕೆ ಒಂದೆರಡು ತುಳು ಚಲನಚಿತ್ರಗಳು ಮಾತ್ರವೇ ತಯಾರಾಗಿ ತೆರೆ ಕಾಣುತ್ತಿದ್ದರೆ, ಈ ವರ್ಷ 15 ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪ್ರಾದೇಶಿಕ ಭಾಷಾ ಚಲನಚಿತ್ರಗಳಡಿ 5 ಚಿತ್ರಗಳಿಗೆ ಮಾತ್ರವೇ ಸಬ್ಸಿಡಿ ದೊರೆಯುತ್ತಿದೆ. 13 ಥಿಯೇಟರ್‌ಗಳಲ್ಲಿ ಮಾತ್ರವೇ ತುಳು ಚಿತ್ರಗಳಿಗೆ ಏಕಕಾಲದಲ್ಲಿ ಬಿಡುಗಡೆಗೆ ಅವಕಾಶವಿರುವುದು. ಹಾಗಾಗಿ ಈ ಎಲ್ಲಾ ಅಂಶಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಗಮನ ಹರಿಸಬೇಕಾಗಿದೆ ಎಂದು ಸ್ಥಾಪಕ ಹರೀಶ್ ಕೊಡ್ಪಾಡಿ ತಿಳಿಸಿದರು.
ಗೋಷ್ಠಿಯಲ್ಲಿ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಸ್ಥಾಪಕಾಧ್ಯಕ್ಷೆ ಅಶ್ವಿನಿ ಕೋಟ್ಯಾನಂ, ಉಪಾಧ್ಯಕ್ಷ ಮೋಹನ್ ಕೊಪ್ಪಲ, ಜತೆ ಕಾರ್ಯದರ್ಶಿ ಪ್ರಜ್ವಲ್ ಅತ್ತಾವರ, ಸಂಚಾಲಕ ಆರ್. ಧನರಾಜ್, ಪ್ರಧಾನ ಸಂಚಾಲಕ ಪ್ರಕಾಶ್ ಶೆಟ್ಟಿ, ಗೌರವ ಸಲಹೆಗಾರರಾದ ಅಸ್ಗರ್ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.







