ಜ. 25: ಯುನಿವೆಫ್ ನಿಂದ ಕುದ್ರೋಳಿಯಲ್ಲಿ ಪ್ರವಾದಿ ಅಭಿಯಾನ
ಮಂಗಳೂರು, ಜ. 24: ಯುನಿವೆಫ್ ಕರ್ನಾಟಕ ಫೆ. 1 ರ ವರೆಗೆ 'ಮಾನವ ಸಮಾಜ ಮತ್ತು ಆಧ್ಯಾತ್ಮಿಕತೆ - ಪ್ರವಾದಿ (ಸ)ರ ದೃಷ್ಟಿಯಲ್ಲಿ' ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಜ.25 ರಂದು ಸಂಜೆ 7.15ಕ್ಕೆ ಕುದ್ರೋಳಿಯ ಎ1 ಭಾಗ್ ನಲ್ಲಿ ಸಾರ್ವಜನಿಕ ಸಭೆ ಜರಗಲಿದೆ.
"ವರ್ತಮಾನದ ಮುಸ್ಲಿಂ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಬ್ಯಾರಿ ಭಾಷೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





