ರೋಸ್‌ವ್ಯಾಲಿ ಹಗರಣ: ಸಿಬಿಐನಿಂದ ನಿರ್ಮಾಪಕ ಮೊಹ್ತಾ ವಿಚಾರಣೆ
ಕೋಲ್ಕತಾ,ಜ.24: ಬಹು ಕೋಟಿ ರೂ.ಗಳ ರೋಸ್‌ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬಂಗಾಳಿ ಚಿತ್ರ ನಿರ್ಮಾಪಕ ಹಾಗೂ ವಿತರಕ ಶ್ರೀಕಾಂತ ಮೊಹ್ತಾ ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ವಿಚಾರಣೆಗೊಳಪಡಿಸಿದ್ದಾರೆ.
ವೆಂಕಟೇಶ ಫಿಲ್ಮ್ಸ್‌ನ ಪಾಲುದಾರರಾಗಿರುವ ಮೊಹ್ತಾ ಅವರಿಗೆ ರೋಸ್ ವ್ಯಾಲಿಯಿಂದ ಹಣ ಸ್ವೀಕಾರಕ್ಕೆ ಸಂಬಂಧಿಸಿದಂತೆ ನೋಟಿಸ್ ನ್ನು ಜಾರಿಗೊಳಿಸಿದ್ದ ಸಿಬಿಐ ಅಧಿಕಾರಿಗಳು ಅವರ ಕಚೇರಿಯಲ್ಲಿ ಪ್ರಶ್ನಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಸಾಲ್ಟ್ ಲೇಕ್ ನಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿದವು.
ಜಾರಿ ನಿರ್ದೇಶನಾಲಯವು ಕೂಡ ರೋಸ್‌ವ್ಯಾಲಿ ಹಗರಣದ ತನಿಖೆಯನ್ನು ನಡೆಸುತ್ತಿದೆ.
ರೋಸ್‌ವ್ಯಾಲಿಯ ಅಧ್ಯಕ್ಷ ಗೌತಮ ಕುಂಡು ಅವರು ಈಗಾಗಲೇ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
Next Story