3 ಲಕ್ಷ ಜನರಿಗೆ ಉದ್ಯೋಗ ನೀಡುವ ರೈಲ್ವೆಯ ಪ್ರಕಟಣೆ ಇನ್ನೊಂದು ‘ಗಿಮಿಕ್’: ಪಿ.ಚಿದಂಬರಂ

ಹೊಸದಿಲ್ಲಿ,ಜ.24:ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂಬ ರೈಲ್ವೆಯ ಪ್ರಕಟಣೆಯು ಕೇಂದ್ರದ ಇನ್ನೊಂದು ‘ಗಿಮಿಕ್’ ಆಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಗುರುವಾರ ಬಣ್ಣಿಸಿದ್ದಾರೆ.
ಸರಕಾರದ ಹೆಚ್ಚಿನ ಇಲಾಖೆಗಳ ಕಥೆ ಒಂದೇ ಆಗಿದೆ. ಒಂದೆಡೆ ಖಾಲಿ ಹುದ್ದೆಗಳಿದ್ದರೆ ಇನ್ನೊಂದೆಡೆ ನಿರುದ್ಯೋಗಿ ಯುವಜನರಿದ್ದಾರೆ. ರೈಲ್ವೆಯು ಸುಮಾರು ಐದು ವರ್ಷಗಳಿಂದಲೂ 2,82,976 ಹುದ್ದೆಗಳನ್ನು ಖಾಲಿಯಾಗಿಯೇ ಇಟ್ಟಿದೆ ಮತ್ತು ಈಗ ಏಕಾಏಕಿಯಾಗಿ ಅವುಗಳನ್ನು ಭರ್ತಿ ಮಾಡುವುದಾಗಿ ಹೇಳುತ್ತಿದೆ. ಇದು ಕಣ್ಣಿಗೆ ಮಣ್ಣೆರಚುವ ಇನ್ನೊಂದು ತಂತ್ರವಾಗಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ಅವರು ಹೇಳಿದ್ದಾರೆ.
ರೈಲ್ವೆಯು ಮುಂದಿನ ಆರು ತಿಂಗಳುಗಳಲ್ಲಿ ಸುಮಾರು 1.31 ಲಕ್ಷ ಮತ್ತು ಮುಂದಿನೆರಡು ವರ್ಷಗಳಲ್ಲಿ ಇನ್ನೂ ಒಂದು ಲಕ್ಷ ಹುದ್ದೆಗಳಿಗೆ ನೇಮಕಗಳನ್ನು ಮಾಡಿಕೊಳ್ಳಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಪ್ರಕಟಿಸಿದ್ದರು.
Next Story





