ಎಸ್ಸೆಸ್ಸೆಫ್ ಹಾಸನ ಜಿಲ್ಲಾಧ್ಯಕ್ಷರಾಗಿ ಶರೀಫ್ ಮಿಸ್ಬಾಹಿ ಆಯ್ಕೆ

ಸಕಲೇಶಪುರ,ಜ.24: ಎಸ್ಸೆಸ್ಸೆಫ್ ಹಾಸನ ಜಿಲ್ಲೆ ಅಧ್ಯಕ್ಷರಾಗಿ ಶರೀಫ್ ಮಿಸ್ಬಾಹಿ ಅರೇಹಳ್ಳಿ ಆಯ್ಕೆಯಾಗಿದ್ದಾರೆ.
ತಾಲೂಕಿನ ದೋಣಿಗಾಲ್ ಮರ್ಷದ್ ಶರೀಹತ್ ಕಾಲೇಜಿನಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶರೀಫ್ ಮಿಸ್ಬಾಹಿ ಅರೇಹಳ್ಳಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಾಸ್ಟರ್ ಸಕಲೇಶಪುರ, ಕೋಶಾಧಿಕಾರಿಯಾಗಿ ಜಾಬಿರ್ ಬಾಹಸನ್ ತಂಙಳ್ ಆಲೂರು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಫಯಾಜ್ ಜನ್ನಾಪುರ ಹಾಗೂ ಸದಸ್ಯರಾಗಿ ಅಬ್ದುಲ್ ರಹ್ಮಾನ್ ಸಹದಿ ಆಚಂಗಿ, ಮುಸ್ತಫಾ ಕುಡುಗರಹಳ್ಳಿ, ಆರಿಫ್ ಆಲೂರು, ಖಾದರ್ ರಿಝ್ವಿ, ವಾಜಿದ್ ಕೂಡಿಗೆ, ರಫೀಕ್ ಕುಡುಗರಹಳ್ಳಿ, ಜುಬೇರ್ ಮಾರನಹಳ್ಳಿ, ಜಾಫರ್ ಹಾಸನ್, ಸುಲೈಮಾನ್ ಸಖಾಫಿ, ಜುನೇದ್ ಹಾಸನ್, ಸಿದ್ದೀಕ್ ಸಹದಿ ಮತ್ತು ಹೈದರ್ ಬಕ್ರವಳ್ಳಿ ರವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸುಪ್ರೀಂ ಕೌನ್ಸಿಲ್ ನ ಅಲವಿ ಸಖಾಫಿ ವಹಿಸಿದ್ದರು. ಮಾರನಹಳ್ಳಿ ತಂಙಳ್, ಹಸೈನಾರ್ ಆನೇಮಹಲ್, ಅಬ್ಬು ಉಸ್ತಾದ್, ರಾಜ್ಯ ನಾಯಕ ಯಾಕೂಬ್ ಮಾಸ್ಟರ್ ಸಭೆಯಲ್ಲಿ ಇದ್ದರು.
Next Story





