ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಪಬ್ಲಿಸಿಟಿ ಕನ್ವೆನ್ಷನ್

ಬಂಟ್ವಾಳ,ಜ.24: ಬೆಂಗಳೂರಿನಲ್ಲಿ ಜ.27 ರಂದು ನಡೆಯುವ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಪ್ರಚಾರಾರ್ಥ ಡಿವಿಷನ್ ಪಬ್ಲಿಸಿಟಿ ಕನ್ವೆನ್ಷನ್ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ ಡಿವಿಷನ್ ಅಧ್ಯಕ್ಷ ಅಕ್ಬರ್ ಅಲಿ ಮದನಿ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಸಭೆಯನ್ನು ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ವಗ್ಗ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಸಿರಾಜುದ್ದೀನ್ ಸಖಾಫಿ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶರೀಫ್ ನಂದಾವರ ಹಾಗೂ ಮುಝಮ್ಮಿಲ್ ಸಖಾಫಿ ಮಾತನಾಡಿದರು. ಜಿಲ್ಲಾ ಸದಸ್ಯರಾದ ಅಬೀದ್ ನಹಿಮಿ, ಡಿವಿಷನ್ ಉಪಾಧ್ಯಕ್ಷ ಸಿದ್ದೀಕ್ ಸಅದಿ, ಅಸ್ಲಂ ಪಂಜಿಕ್ಕಲ್, ಕ್ಯಾಂಪಸ್ ಕಾರ್ಯದರ್ಶಿ ಮೌಸೂಫ್ ಮೆಲ್ಕಾರ್, ಸದಸ್ಯರಾದ ಕರೀಂ ಕದ್ಕಾರ್ ಇರ್ಷಾದ್ ಗೂಡಿನಬಳಿ, ಇಬ್ರಾಹಿಂ ಸುರಿಬೈಲ್, ನೌಫಲ್ ಕಟ್ಟತ್ತಿಲ ಹಾಗೂ ಸೆಕ್ಟರ್ ನಾಯಕರು, ಯುನಿಟ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಡಿವಿಷನ್ ಕೋಶಾಧಿಕಾರಿ ಮುಹಮ್ಮದ್ ಅಲಿ ಮದನಿ ಸ್ವಾಗತಿಸಿದರು. ಕಾರ್ಯದರ್ಶಿ ಹಾರೀಸ್ ಚಟ್ಟೆಕ್ಕಲ್ ಧನ್ಯವಾದ ಅರ್ಪಿಸಿದರು.





