ಫೆ.10ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನೆ -ಬ್ರಹ್ಮ ಕಲಶ ಉತ್ಸವ
ಮಂಗಳೂರು, ಜ. 24: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.10 ರಿಂದ ಫೆ.17ರವರೆಗೆ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶ ಉತ್ಸವ ನಡೆಯಲಿದೆ ಎಂದು ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶಿವಗಿರಿ ಮಠದ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಹಾಗೂ ಶಿವಗಿರಿ ಮಠದ ಶ್ರೀ ಸುಗುದಾನಂದ ತಂತ್ರಿ ಮತ್ತು ಶ್ರೀ ಕ್ಷೇತ್ರದ ಲಕ್ಷ್ಮಣ ಶಾಂತಿಯವರ ಪೌರೋಹಿತ್ಯದಲ್ಲಿ ಧ್ವಜ ಸ್ತಂಭದ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶದ ವಿಧಿ ವಿಧಾನಗಳು ನಡೆಯಲಿದೆ.
ಫೆ.10ರಂದು ಸಂಜೆ.6.30ಕ್ಕೆ ಪ್ರಾರ್ಥನೆಯೊಂದಿಗೆ ಧಾರ್ಮಿಕ ಪೂಜಾ ವಿಧಿಗಳು ಆರಂಭಗೊಳ್ಳಲಿದೆ.ಫೆ. 11ರಂದು ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ತೋರಣ ಮುಹೂರ್ತ , ಉಗ್ರಾಣ ಮುಹೂರ್ತ,ವಿಶ್ವ ಶಾಂತಿ ಹೋಮ ಕುಂಡ ಶುದ್ಧಿ, ಮಹಾಪೂಜೆ, ಫೆ.12ರಂದು ದೀಪಾರಾಧನೆ, ವಾಸ್ತುಕಲಶಾಭಿಷೇಕ, ಫೆ.13ರಂದು ಬೆಳಗ್ಗೆ ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ,ತ್ರಿಕಾಲ ಅಂಕುರ ಪೂಜೆ, ಪಂಚಗವ್ಯ ,ಕಲಶ ಮಹಾಭಿಷೇಕ, ಸಂಜೆ 4 ಗಂಟೆಗೆ ನಗರದ ನೆಹರು ಮೈದಾನದಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಇದರಲ್ಲಿ ಕರಾವಳಿ ಜಿಲ್ಲೆಯ 500ಕ್ಕೂ ಅಧಿಕ ವಾಹನಗಳು ,ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಸಂಜೆ 6ಗಂಟೆಯಿಂದ ದೀಪಾರಾಧನ, ಬಿಂಬ ಶುದ್ಧಿ, ಮಹಾಪೂಜೆ ನಡೆಯಲಿದೆ.
ಫೆ.14ರಂದು ಮಹಾ ಪೂಜೆ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ,ತ್ರಿಕಾಲ ಭಗವತಿ ಪೂಜೆ, ಶಾಂತಿ ಪೂಜೆ,ಅದ್ಭುತ ಶಾಂತಿ ಹೋಮ, ಕಲಶಾಭಿಷೇಕ, ಮಹಾಪೂಜೆ ದಿಪಾರಾಧನೆ, ಮಹಾ ಪೂಜೆ ನಡೆಯಲಿದೆ. ಫೆ.15ರಂದು ಬೆ.8.15 ಗಂಟೆಗೆ ಗರ್ಭಗುಡಿ ಶಿಖರ ಪ್ರತಿಷ್ಠೆ , ಚಂಡಿಕಾ ಹೋಮ, ಮಹಾ ಪೂಜೆ ನಡೆಯಲಿದೆ.
ಫೆ.16ರಂದು ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ಮಹಾಪೂಜೆ ನಡೆಯಲಿದೆ. ಫೆ.17ರಂದು ಬೆ.5ಕ್ಕೆ ಮಹಾಗಣಪತಿ ಹೋಮ, ಗುರುಪೂಜೆ, ರಾಜ ಗೋಪು ರ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಅಧಿವಾಸಂ, ವೀರಕಾಂಡ ಪೀಠ ಪೂಜೆ, ಕಲಶಾಭಿಷೇಕ, ಧ್ವಜಾರೋಹಣ,ಮಧ್ಯಾಹ್ನ 12.15 ಗಂಟೆಗೆ ಬ್ರಹ್ಮಕ ಲಶಾ ಭಿಷೇಕ, ವಿಶೇಷ ಪೂಜೆ, ನೈವೇದ್ಯ ಪೂಜೆ,ಪ್ರಸನ್ನ ಪೂಜೆ, ಮಹಾ ಮಂಗಳಾ ರತಿ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜ ಸ್ತಂಭ ಪ್ರತಿಷ್ಠಾಪನೆ ನಡೆಯಲಿದೆ ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಫೆ.27ರಿಂದ ಮಾರ್ಚ್ 6ರವರೆಗೆ ನಡೆಯಲಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.10ರಿಂದ ಫೆ.17ರವರೆಗೆ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶ ಉತ್ಸವ ಹಾಘೂ ಫೆ.27ರಿಂದ ಮಾರ್ಚ್ 6ರವರೆಗೆ ನಡೆಯಲಿರುವ ಜಾತ್ರಾಮಹೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮ ರಾಜ್ ಆರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಸುಮಾ ವಸಂತ್ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್,ಪದಾಧಿಕಾರಿಗಳಾದ ಬಿ.ಮಾದವ ಸುವರ್ಣ,ರವಿಶಂಕರ ಮಿಜಾರ್,ಕ್ಷೇತ್ರ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್,ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಡಾ.ಬಿ.ಜಿ ಸುವರ್ಣ, ದೇವೇಂದ್ರ ಪುಜಾರಿ, ಹರಿಕೃಷ್ಣ ಬಂಟ್ವಾಳ್, ಡಿ.ಡಿ.ಕಟ್ಟೆಮಾರ್, ಡಾ.ಅನಸೂಯ ಹಾಗೂ ಚಂದ್ರ ಶೇಖರ ಕಾವೂರು, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







