ಮೂಡುಬಿದಿರೆ: ಜನರೇಶನ್ ನೆಕ್ಸ್ಟ್-ಅಬಕಾಸ್, ವೇದಿಕ್ ಮ್ಯಾಥ್ಸ್ ರಾಜ್ಯಮಟ್ಟದ ಸ್ಪರ್ಧೆ

ಮೂಡುಬಿದಿರೆ, ಜ. 24: ಸರಿಯಾದ ಕಲಿಕೆ, ಆರೋಗ್ಯಕರ ಸ್ಪರ್ಧೆ ಮಕ್ಕಳ ಸಾಮರ್ಥ್ಯ ವನ್ನು ಹೆಚ್ಚಿಸುತ್ತದೆ. ಸ್ಪರ್ಧೆಗಳು ಕೀಳರಿಮೆ ಉಂಟು ಮಾಡುವುದಕ್ಕಲ್ಲ. ನಾವು ನಮ್ಮ ಜೊತೆ ಸ್ಪರ್ಧೆ ಮಾಡಿದಾಗ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಮೊಬೈಲ್, ಸಾಮಾಜಿಕ ಜಾಲತಾಣ, ಮಕ್ಕಳಿಂದ ಬಾಲ್ಯ ವನ್ನು ಕಸಿದುಕೊಳ್ಳುತ್ತಿದೆ. ಆದರೆ ಇನ್ನೊಂದು ಕಡೆಯಲ್ಲಿ ಕಲಿಕೆಗೆ ಹಲವಾರು ಮಾರ್ಗಗಳಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಜನರೇಶನ್ ನೆಕ್ಸ್ಟ್ ಎಜ್ಯುಕೇಶನ್- ಲರ್ನಿಂಗ್ ಸೆಂಟರ್ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಸಹಯೋಗದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಅಬಕಾಸ್, ವೇದಿಕ್ ಮ್ಯಾಥ್ಸ್, ಕ್ಯಾಲಿಗ್ರಾಫಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದುಬೈಯ ಮ್ಯಾಕ್ರೋಕುಲ್ ಸ್ಟೆಮ್ ಹಾಗೂ ರೋಬೋಟಿಕ್ಸ್ ಸಂಸ್ಥೆಯ ಅಕಾಡೆಮಿಕ್ ನಿರ್ದೇಶಕ ಸುರೇಶ್ ಕುಮಾರ್ ಮುಖ್ಯ ಅತಿಥಿಯಾಗಿ, ಶಿಕ್ಷಣ ಎನ್ನುವುದು ಜಗತ್ತಿನ ಸೂಪರ್ ಪವರ್ ಎಂದು ಹೇಳಿದರು.
ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷ ವಿನ್ಸೆಂಟ್ ಡಿ’ಕೋಸ್ತ ಮುಖ್ಯ ಅತಿಥಿಯಾಗಿದ್ದರು. ಜನರೇಶನ್ ನೆಕ್ಸ್ಟ್ ತರಬೇತುದಾರರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಜನರೇಶನ್ ನೆಕ್ಸ್ಟ್ ಸಂಸ್ಥೆಯ ನಿರ್ದೇಶಕ ಗುರುರಾಜ್ ಡಿ.ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೀಪಿಕಾ ಸ್ವಾಗತಿಸಿದರು. ಆಶಿಕಾ ಕಾರ್ಯಕ್ರಮ ನಿರೂಪಿಸಿದರು. ಕಸ್ತೂರಿ ವಂದಿಸಿದರು.







