ಮಂಗಳೂರು: ಸಕಲೇಶಪುರ ಮೂಲದ ಮಹಿಳೆ ನಾಪತ್ತೆ

ಮಂಗಳೂರು, ಜ.24: ನಗರದ ಅತ್ತಾವರ ಕಾಪ್ರಿಗುಡ್ಡೆಯ ಮನೆಯೊಂದರಲ್ಲಿ ಕೆಲಸಕ್ಕಿದ್ದ ಮೂಲತಃ ಸಕಲೇಶಪುರ ನಿವಾಸಿ ಲತಾ (23) ಎಂಬವರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.21ರಂದು ಬೆಳಗ್ಗೆ 6:45ಕ್ಕೆ ತನ್ನ ಬಟ್ಟೆಬರೆಗಳನ್ನು ತೆಗೆದುಕೊಂಡು ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಇವರನ್ನು ನಗರದ ರೈಲ್ವೆ, ಬಸ್ ನಿಲ್ದಾಣ, ಮಾರ್ಕೆಟ್ ವಠಾರಗಳಲ್ಲಿ ಹುಡುಕಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರ ಪೋಷಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ. ಮನೆ ಮಾಲಕರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಚಹರೆ: ದಪ್ಪ ಶರೀರ, ಕಪ್ಪು ಮೈಬಣ್ಣ, ಉದ್ದ ತಲೆ ಕೂದಲು, 5 ಅಡಿ ಎತ್ತರ, ಕಪ್ಪು ಮತ್ತು ಹಳದಿ ಚೂಡಿದಾರ, ನೀಲಿ ಕಲರ್ ಜಾಕೆಟ್ ಹಾಕಿದ್ದಾರೆ. ಕನ್ನಡ ಮತ್ತು ಬ್ಯಾರಿ ಭಾಷೆ ಮಾತನಾಡುತ್ತಾರೆ.
Next Story





