ವಸೀಂ ಜಾಫರ್ ಅಪರೂಪದ ಸಾಧನೆ

ಮುಂಬೈ, ಜ.24: ವಿದರ್ಭ ರಣಜಿ ಕ್ರಿಕೆಟ್ ತಂಡದ ಹಿರಿಯ ದಾಂಡಿಗ ವಸೀಂ ಜಾಫರ್ ದೇಶೀಯ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಕೇರಳ ವಿರುದ್ಧ ಗುರುವಾರ ಆರಂಭವಾರ ರಣಜಿಯ ಸೆಮಿ ಫೈನಲ್‌ನಲ್ಲಿ ಜಾಫರ್ ಕೇವಲ 34 ರನ್ ಗಳಿಸಿದ್ದರೂ 2 ಪ್ರತ್ಯೇಕ ರಣಜಿ ಟೂರ್ನಿಯಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ಮೊದಲ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು. ಪ್ರಸ್ತುತ ಅವರು 4 ಶತಕ ಸಹಿತ ಒಟ್ಟು 1,003 ರನ್ ಗಳಿಸಿದ್ದಾರೆ. 2008-09ರಲ್ಲಿ ಮುಂಬೈ ರಣಜಿ ತಂಡದಲ್ಲಿದ್ದಾಗ ಜಾಫರ್ 1,260 ರನ್ ಗಳಿಸಿದ್ದರು.
Next Story





