ರಾಷ್ಟ್ರ ರಕ್ಷಣೆಯ ಸಂಕಲ್ಪ: ಜ. 26ರಂದು ಕಡಬದಲ್ಲಿ ಮಾನವ ಸರಪಳಿ
ಪುತ್ತೂರು, ಜ. 25: ರಾಷ್ಟ್ರ ರಕ್ಷಣೆಯ ಸಂಕಲ್ಪದಲ್ಲಿ ಜ. 26ರಂದು ದ.ಕ.ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಸಮಿತಿ ವತಿಯಿಂದ ಕಡಬದಲ್ಲಿ ಜಿಲ್ಲಾ ಮಟ್ಟದ ಮಾನವ ಸರಪಳಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಸುಮಾರು 12 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಎಸ್‍ಕೆಎಸ್‍ಎಸ್‍ಎಫ್ ಪುತ್ತೂರು ವಲಯ ಅಧ್ಯಕ್ಷ ಮಹಮ್ಮದ್ ತಾಜುದ್ದೀನ್ ರಹ್ಮಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಏಕತೆ ಮತ್ತು ಅಖಂಡತೆಯನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ವಿವಿಧ ಭಾಷೆ, ಉಡುಗೆ ತೊಡುಗೆಗಳು, ಆಹಾರ ಪದ್ದತಿ, ಆಚಾರ ವಿಚಾರಗಳನ್ನು ಹೊಂದಿರುವ ಇಲ್ಲಿನ ಪ್ರಜೆಗಳ ಮದ್ಯೆ ಪರಸ್ಪರ ಸಾಮರಸ್ಯ ಮತ್ತು ಸ್ನೇಹವನ್ನು ಬೆಳೆಸಿ ಉತ್ತಮ ಸಮಾಜ ನಿರ್ಮಾಣ ಮಾಡುವುದರೊಂದಿಗೆ ದೇಶವನ್ನು ಆಭಿವೃದ್ಧಿಯ ಉತ್ತುಂಗತೆಗೆ ತಲುಪಿಸುವ ಜವಾಬ್ದಾರಿಯನ್ನು ತಿಳಿಸುವ ನಿಟ್ಟಿನಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮವನ್ನು ಎಲ್ಲಾ ಧರ್ಮೀಯರ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಪರಾಹ್ನ 3 ಗಂಟೆಗೆ ಕಡಬ ಹಳೇ ಸ್ಟೇಷನ್‍ನಿಂದ ಕಳಾರ ಎಂಬಲ್ಲಿಯ ತನಕ ಬೃಹತ್ ಸೌಹಾರ್ದ ರ್ಯಾಲಿ ನಡೆಯಲಿದೆ. ಇದರಲ್ಲಿ ಸ್ಕೌಟ್, ದರ್ಫ ತಂಡಗಳು ಭಾವಹಿಸಲಿದೆ. ಸಂಜೆ 4 ಗಂಟೆಗೆ ಕಳಾರದಲ್ಲಿ ಮಾನವ ಸರಪಳಿ ಸೌಹಾರ್ದ ಸಂಗಮ ನಡೆಯಲಿದ್ದು, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಕೆಎಸ್‍ಎಸ್‍ಎಫ್ ಪುತ್ತುರು ವಲಯ ಕೋಶಾಧಿಕಾರಿ ಅಶ್ರಫ್ ಮುಕ್ವೆ, ವಿಖಾಯ ಕನ್ವೀನರ್ ಮನ್ಸೂರ್ ಮೌಲಮಿ ಅಮ್ಚಿನಡ್ಕ, ಸಹಚಾರಿ ಕನ್ವೀನರ್ ಅಬ್ದುನ್ನಾಸಿರ್ ದಾರಿಮಿ ಉಜ್ರುಪಾದೆ ಮತ್ತು ತ್ವಲಬಾ ಸಂಚಾಲಕ ರಿಯಾಝ್ ಫೈಝಿ ಪಟ್ಟೆ ಉಪಸ್ಥಿತರಿದ್ದರು.







