ಕಬ್ಬಿನ ರಸ ಈ ದೇಶದ ರಾಷ್ಟ್ರೀಯ ಪೇಯ

ಇಸ್ಲಾಮಾಬಾದ್, ಜ. 25: ಪಾಕಿಸ್ತಾನ ಸರಕಾರವು ಶುಕ್ರವಾರ ಕಬ್ಬಿನ ರಸವನ್ನು ದೇಶದ ‘ರಾಷ್ಟ್ರೀಯ ಪೇಯ’ ಎಂಬುದಾಗಿ ಘೋಷಿಸಿದೆ.
ಟ್ವಿಟರ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಸರಕಾರವು ಈ ಘೋಷಣೆಯನ್ನು ಮಾಡಿದೆ. ದೇಶದ ರಾಷ್ಟ್ರೀಯ ಪೇಯ ಯಾವುದಾಗಬೇಕು ಎಂಬುದಾಗಿ ಪಾಕಿಸ್ತಾನ ಸರಕಾರವು ಟ್ವಿಟರ್ ಬಳಕೆದಾರರನ್ನು ಪ್ರಶ್ನಿಸಿತ್ತು ಹಾಗೂ ಮೂರು ಆಯ್ಕೆಗಳನ್ನು ನೀಡಿತ್ತು. ಅವುಗಳೆಂದರೆ ಕಬ್ಬಿನ ರಸ, ಕಿತ್ತಳೆ ರಸ ಮತ್ತು ಕ್ಯಾರಟ್ ರಸ.
7,616 ಮಂದಿ, ಅಂದರೆ 81 ಶೇಕಡ ಜನರು ಕಬ್ಬಿನ ರಸದ ಪರವಾಗಿ ಮತ ಚಲಾಯಿಸಿದರು. 15 ಶೇಕಡ ಮಂದಿ ಕಿತ್ತಳೆ ರಸದ ಪರವಾಗಿ ಮತ ಚಲಾಯಿಸಿದರೆ, 4 ಶೇಕಡ ಮಂದಿ ಕ್ಯಾರಟ್ ರಸದ ಪರವಾಗಿ ನಿಂತರು.
Next Story





