ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಬಿಡಿಎಗೆ ಪ್ರಥಮ ಸ್ಥಾನ
ಬೆಂಗಳೂರು, ಜ.25: ಗಣರಾಜ್ಯೋತ್ಸವದ ಅಂಗವಾಗಿ ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿವಿಧ ಪ್ರವರ್ಗಗಳ ಅಡಿಯಲ್ಲಿ ಸರಕಾರದ ಸಂಸ್ಥೆಗಳಲ್ಲಿ ಗರಿಷ್ಠ ಬಹುಮಾನ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಪ್ರದರ್ಶನದಲ್ಲಿ ಆಲಂಕಾರಿಕ ಸಸ್ಯಗಳ ವರ್ಗದಲ್ಲಿನ 104 ಅತ್ಯುತ್ತಮ ಪ್ರಶಸ್ತಿ(ಆಲಂಕಾರಿಕ ಸಸ್ಯಗಳಿಗೆ 63 ಹಾಗೂ ಕುಂಡದಲ್ಲಿ ತರಕಾರಿ ಬೆಳೆಯುವ ವರ್ಗದ ಸ್ಪರ್ಧೆಯಲ್ಲಿ 41 ಪ್ರಥಮ ಪುರಸ್ಕಾರ), ರೋಲಿಂಗ್ ಶೀಲ್ಡ್‌ನಲ್ಲಿ 13 ಹಾಗೂ ರೋಲಿಂಗ್ ಕಪ್ ಹಾಗೂ ಉತ್ತಮವಾಗಿ ನಿರ್ವಹಿಸಿದ ಆಲಂಕಾರಿಕ ತೋಟಗಳಿಗಾಗಿ 2 ಪಾರಿತೋಷಕ ಪಡೆದಿದೆ.
ಒಟ್ಟಾರೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಸರಕಾರಿ ಹಾಗೂ ಎಲ್ಲ ಇಲಾಖೆಗಳಲ್ಲಿ ಪ್ರಾಧಿಕಾರ ಪ್ರಥಮ ಸ್ಥಾನ ಪಡೆದಿದ್ದು, ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಾಯಿತು.
Next Story





