ಸರಕಾರಿ ಪ್ರೌಢಶಾಲೆಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು

ಬೆಂಗಳೂರು, ಜ.25: ನಮಗೊಂದು ಸರಕಾರಿ ಪ್ರೌಢಶಾಲೆಯನ್ನು ನಿರ್ಮಿಸಿ ಎಂದು ಆಗ್ರಹಿಸಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಭಿತ್ತಿ ಪತ್ರಗಳನ್ನು ಹಿಡಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶುಕ್ರವಾರ ನಗರದ ಲಗ್ಗೆರೆ ಹಾಗೂ ಲಕ್ಷ್ಮೀದೇವಿ ನಗರ ವ್ಯಾಪ್ತಿಯಲ್ಲಿ ಎಐಡಿಎಸ್‌ಓ, ಎಸ್‌ಯುಸಿಐ(ಸಿ) ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ ಪ್ರೌಢ ಶಾಲೆಯೊಂದನ್ನು ನಿರ್ಮಿಸಿ, ಈ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಕೆ.ಎಸ್.ಅಶ್ವಿನಿ ಮಾತನಾಡಿ, ಕೇವಲ ಒಂದು ಹೊತ್ತಿನ ಊಟಕ್ಕಾಗಿ ದುಡಿಯುತ್ತಿರುವ ಲಗ್ಗೆರೆ ಮತ್ತು ಲಕ್ಷ್ಮೀದೇವಿ ನಗರದ ತೀರಾ ದುಸ್ಥಿತಿಯಲ್ಲಿರುವ ಜೀವಾನ ಸಾಗಿಸುತ್ತಿದ್ದು, ಇಲ್ಲಿನ ಮಕ್ಕಳಿಗೆ ವೌಲ್ಯ ಸೌಕರ್ಯಯುಳ್ಳ ಸರಕಾರಿ ಪ್ರೌಢಶಾಲೆ ಅಗತ್ಯ ಇದೆ ಎಂದರು.
ಪ್ರತಿಭಟನೆಯಲ್ಲಿ ಎಸ್‌ಯುಸಿಐ(ಸಿ) ಸದಸ್ಯ ಧನುಶ್, ಕಾರ್ಯದರ್ಶಿ ಕೆ.ಎಸ್.ರಜನಿ ಸೇರಿದಂತೆ ಪೋಷಕರು, ಸ್ಥಳೀಯರು ಪಾಲ್ಗೊಂಡಿದ್ದರು.





