ಸುನೀಲ್ ಚೆಟ್ರಿ, ಗಂಭೀರ್ ಸಹಿತ 8 ಕ್ರೀಡಾಳುಗಳಿಗೆ ಪದ್ಮಶ್ರೀ
ಬಚೇಂದ್ರಿ ಪಾಲ್ ಗೆ ಪದ್ಮಭೂಷಣ

ಪರ್ವತಾರೋಹಿ ಬಚೇಂದ್ರಿ ಪಾಲ್
ಹೊಸದಿಲ್ಲಿ, ಜ.25: ಸ್ಟಾರ್ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ವಿಶ್ವಕಪ್ ವಿಜೇತ ಕ್ರಿಕೆಟಿಗ ಗೌತಮ್ ಗಂಭೀರ್ ಸಹಿತ ಒಟ್ಟು 8 ಕ್ರೀಡಾಳುಗಳಿಗೆ 70ನೇ ಗಣರಾಜ್ಯೋತ್ಸವ ಮುನ್ನಾದಿನ ಕೇಂದ್ರ ಸರಕಾರ 2019ರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 94 ಜನರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ. ಸುನೀಲ್ ಚೆಟ್ರಿ(ಫುಟ್ಬಾಲ್), ಹರಿಕಾ ದ್ರೋಣವಲ್ಲಿ(ಚೆಸ್), ಗೌತಮ್ ಗಂಭೀರ್(ಕ್ರಿಕೆಟ್), ಶರತ್ ಕಮಲ್(ಟೇಬಲ್ ಟೆನಿಸ್), ಬೊಂಬಯ್ಲಿದೇವಿ(ಆರ್ಚರಿ), ಬಜರಂಗ್ ಪೂನಿಯಾ(ಕುಸ್ತಿ), ಪ್ರಶಾಂತಿ ಸಿಂಗ್(ಬಾಸ್ಕೆಟ್ಬಾಲ್)ಹಾಗೂ ಅಜಯ್ ಠಾಕೂರ್(ಕಬಡ್ಡಿ) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಚೇಂದ್ರಿ ಪದ್ಮಭೂಷಣ: ಉತ್ತರಖಂಡದ 64ರ ರ ಹರೆಯದ ಪರ್ವತಾರೋಹಿ ಬಚೇಂದ್ರಿ ಪಾಲ್ಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. 1984ರಲ್ಲಿ ವೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್.
Next Story





