ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಗಣರಾಜ್ಯೋತ್ಸವ

ಬಂಟ್ವಾಳ, ಜ. 26: ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ 70ನೆ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹಿದಾಯ ಫೌಂಡೇಶನ್, ಎಂ. ಫ್ರೆಂಡ್ಸ್‍ನ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಅವರು ಧ್ವಜಾರೋಹಣ ನೆರವೇರಿಸಿದರು.
ಎಂ. ಫ್ರೆಂಡ್ಸ್ ವತಿಯಿಂದ ನಡೆಸಲ್ಪಡುವ "ಕಾರುಣ್ಯ ಯೋಜನೆ"ಗೆ ವಿದ್ಯಾರ್ಥಿನಿಯರಲ್ಲಿ ಸೇವಾ ಹಾಗೂ ಸಹಕಾರ ಮನೋಭಾವನೆಯನ್ನು ಬೆಳೆಸುವ ಸಲುವಾಗಿ ಕಾಲೇಜಿನ ವಿದ್ಯಾರ್ಥಿನಿಯರು ಸಂಗ್ರಹಿಸಿದ 25 ಸಾವಿರ ರೂ.ವನ್ನು ನೀಡಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಅಮಾನುಲ್ಲಾ ಖಾನ್ ಅವರು ವಿದ್ಯಾರ್ಥಿನಿಯರಿಗೆ ಸಂವಿಧಾನದ ಮಹತ್ವದ ಕುರಿತು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸೀನ್ ಬೇಗ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪ್ರಜ್ಞಾ, ವಿದ್ಯಾರ್ಥಿನಿಯರಾದ ಆಯಿಷಾ ಮಿಶ್ರೀಯಾ ಮತ್ತು ಸಂಬ್ರೀನ್ ಬಾನು ಗಣರಾಜ್ಯೋತ್ಸವದ ಕುರಿತು ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸೀನ್ ಬೇಗ್ ಅಧ್ಯಕ್ಷೀಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಗೀತಾ ಜಿ. ಭಟ್, ಅನುಗ್ರಹ ಎಜುಕೇಶನಲ್ ಟ್ರಸ್ಟ್‍ನ ಸದಸ್ಯ ಅಬ್ದುಲ್ ಹಮೀದ್ ಬಂಟ್ವಾಳ, ಅಬ್ದುರ್ರಹ್ಮಾನ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಹಾಜಿರಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸೌಶಾನ ಕಿರಾತ್ ಪಠಿಸಿ, ಫಾತಿಮತ್ ಅಝ್ಮೀಯಾ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.







