ಉಳ್ಳಾಲ ದರ್ಗಾ ಸಮಿತಿ ವತಿಯಿಂದ ಗಣರಾಜೋತ್ಸವ ಆಚರಣೆ

ಮಂಗಳೂರು, ಜ. 26: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ 70ನೇ ಗಣರಾಜೋತ್ಸವವನ್ನು ಸಂಭ್ರ್ರಮದಿಂದ ಆಚರಿಸಲಾಯಿತು.
ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ ದರ್ಗಾ ವಠಾರದಲ್ಲಿ ದ್ವಜಾರೋಹಣಗೈದರು. ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಉಸ್ಮಾನ್ ಪೈಝಿ ತೋಡಾರ್ ಉಸ್ತಾದ್ ದುಆಗೈದರು, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲಿಮೋನು, ಎಚ್.ಕೆ ಮುಹಮ್ಮದ್ ಮತ್ತಿತ್ತರರು ಉಪಸ್ಥಿತರಿದ್ದರು.










