ಎನ್‌ಎಂಪಿಟಿಯಿಂದ ಸಂಭ್ರಮದ ಗಣರಾಜ್ಯೋತ್ಸವ

ಮಂಗಳೂರು, ಜ.26: ನವಮಂಗಳೂರು ಬಂದರ್ ಟ್ರಸ್ಟ್ (ಎನ್‌ಎಂಪಿಟಿ)ಯಿಂದ 70ನೇ ಗಣರಾಜ್ಯೋತ್ಸವವನ್ನು ಪೋರ್ಟ್ ಸ್ಟೇಡಿಯಂ ಮೈದಾನದಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಪಣಂಬೂರು ಸಿಐಎಸ್‌ಎಫ್‌ನ ಘಟಕ, ಎನ್‌ಎಂಪಿಟಿ ಫೈರ್ ಸರ್ವೀಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ಗಳಿಂದ ಆಕರ್ಷಕ ಪೆರೇಡ್ ನಡೆಸಲಾಯಿತು. ಪೋರ್ಟ್ ವಿಜಿಲೆನ್ಸ್ ಚೀಫ್ ಶ್ರೀಕೃಷ್ಣ ಕರುತುರಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
Next Story





