ಶೀರೂರಿನಲ್ಲಿ 300 ಮೀ.ಉದ್ದದ ಬಾವುಟ !

ಬೈಂದೂರು, ಜ.26: ಬೈಂದೂರು ತಾಲೂಕು ಶೀರೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಇಂದು ಗಣರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ, ವಿಭಿನ್ನವಾಗಿ ಆಚರಿಸಿದರು.
ಈ ಸರಕಾರಿ ಶಾಲೆಯ ಮಕ್ಕಳು 300ಮೀ. ಉದ್ದದ ಬೃಹತ್ ತಿರಂಗವನ್ನು ತಯಾರಿಸಿ ಅದನ್ನು ಪ್ರದರ್ಶಿಸಿದರು. ಈ 300ಮೀ. ಉದ್ದದ ತಿರಂಗವನ್ನು ನೂರಾರು ಮಕ್ಕಳು ಹಿಡಿದು ಮೆರವಣಿಗೆ ಮಾಡಿದರು.
ಶಾಲಾ ಕಾರ್ಯಕ್ರಮದ ಬಳಿಕ ಅವರು ಶೀರೂರಿನ ಪ್ರಮುಖ ರಸ್ತೆಗಳಲ್ಲಿ ಈ ತಿರಂಗವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗುತ್ತಾ ದೇಶಭಕ್ತಿಯ ಘೋಷಣೆಗಳನ್ನು ಕೂಗಿದರು. ರಸ್ತೆಯ ಅಕ್ಕಪಕ್ಕದಲ್ಲಿ ನಿಂತ ನೂರಾರು ಮಂದಿ ಮಕ್ಕಳ ಈ ಸಾಹಸವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.








