ಭಾರತ ವಿಶ್ವದ ಅತೀ ದೊಡ್ಡ ಗಣತಂತ್ರ ವ್ಯವಸ್ಥೆ ಹೊಂದಿದ ರಾಷ್ಟ್ರ- ಎ.ಸಿ. ಕೃಷ್ಣಮೂರ್ತಿ

ಪುತ್ತೂರು, ಜ. 26: ಲಕ್ಷಾಂತರ ಮಂದಿ ತಮ್ಮ ಪ್ರಾಣ ಕೊಟ್ಟು ಹೋರಾಟ ಮಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಆಗಿದೆ. ಬಳಿಕದ ದಿನದಲ್ಲಿ ಅಂಬೇಡ್ಕರ್ ಮೂಲಕ ಸಂವಿಧಾನ ರಚನೆಯಾಗಿ ಅದನ್ನು ಗಣತಂತ್ರ ದಿನವೆಂದು ಘೋಷಣೆ ಮಡುವ ಮೂಲಕ ವಿಶ್ವದ ಅತಿ ದೊಡ್ಡ ಗಣತಂತ್ರ ವ್ಯವಸ್ಥೆ ಹೊಂದಿದ ರಾಷ್ಟ್ರ ನಮ್ಮದಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಹೆಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ದೇಶದಲ್ಲಿ ಪರಿಸರದ ನಾಶ ಅಗುವುದನ್ನು ತಪ್ಪಿಸಿ ಅದನ್ನು ಉಳಿಸುವ, ಸ್ವಚ್ಛತೆ ಎಲ್ಲಿದೆಯೋ ಅಲ್ಲಿ ದೇವರನ್ನು ಕಾಣುವ ಮೂಲಕ ಸ್ವಚ್ಛತೆಗೆ ಆದ್ಯತೆ, ನೀರು ಅನ್ನುವುದು ಅಮೃತ, ನಮಗೆ ನೀರು ಆಹಾರ, ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯನ್ನು ಇಟ್ಟು ಕೊಂಡರೆ ಈ ದೇಶವನ್ನು ಉಳಿಸಿ ಬೆಳೆಸುವ ಕಟ್ಟುವ ಕೆಲಸ ನಮ್ಮದಾಗುತ್ತದೆ ಎಂದು ಸಂದೇಶ ನೀಡಿದರು. ಭಾರತ ದೇಶದ ಇತಿಹಾಸ ಅನ್ನುವುದು ಇಂಗ್ಲೇಂಡಿನ ಲೈಬ್ರೆರಿ ಸೆಲ್ಫ್‍ನಲ್ಲಿ ಇದೆ ಎಂದು ಭಾರತ ಅನಾಗರಿಕರು, ಅಜ್ಞಾನಿಗಳು ಹೊಂದಿರುವ ದೇಶ ಎಂದ ಮೆಕಾಲೆಯ ಅಭಿಪ್ರಾಯವನ್ನು ಅದೇ ದೇಶದ ಪರಕೀಯ ಅಲೆಗ್ಸಾಂಡರ್ ಕನ್‍ವಿಯಂ, ಮೆಕ್‍ಮುಲನ್ ನಮ್ಮ ದೇಶದ ಸಂಸ್ಕøತಿಯನ್ನು, ಪರಂಪರೆಯನ್ನು ಪ್ರಾಚಿನ ನಾಗರಿಕೆತೆಯನ್ನು ಸಂಶೋದನೆ ಮಾಡಿ ಇಂತಹ ಭವ್ಯ ನಾಗರಿಕತೆಯುಳ್ಳ ದೇಶಕ್ಕೆ ನಾವು ಪಾಠ ಹೇಳಲು ಹೋಗುತ್ತೇವೆಯಲ್ಲ ನಮ್ಮಂತಹ ಮೂರ್ಖರು ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಾರೆ ಎಂದಾದರೆ ನಮ್ಮ ದೇಶದ ಭವ್ಯತೆ, ಶ್ರೀಮಂತಿಕೆಯ ದೇಶ ಅನ್ನುವುದು ಗೊತ್ತಾತ್ತದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಗಣರಾಜ್ಯೋತ್ಸವವನ್ನು ಫೆಸ್ಟಿವಲ್ ಆಫ್ ಡೆಮೊಕ್ರೆಸಿ ಎಂದು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕಾದರೆ ಪ್ರಜೆಯೇ ಪ್ರಭು ಆಗಿರಬೇಕಾದರೆ ತನ್ನ ಹಕ್ಕನ್ನು ಸಂದರ್ಭ ಬಂದಾಗ ಚಲಾವಣೆ ಮಾಡುವುದು ಕೂಡಾ ಅಷ್ಟೆ ಮುಖ್ಯ. ರಾಜಾಶ್ರಯದಿಂದ ಪ್ರಜಾ ಆಶ್ರಯಕ್ಕೆ ಈ ಅಧಿಕಾರ ದೇಶದಲ್ಲಿ ಬರಬೇಕಾದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ಬಂದುಗಳನ್ನು ನೆನಪಿಸುತ್ತಾ ಇವತ್ತು ಪ್ರಜಾಪ್ರಭುತ್ವದಲ್ಲಿ ನೆಮ್ಮದಿ ಸಮೃದ್ಧಿಯನ್ನು ಕಾಣವ ನಾವೆಲ್ಲ 70ರ ಸಂಭ್ರಮ ಆಚರಿಸುತ್ತಿದ್ದವೆ ಎಂದ ಅವರು ದೇಶಕ್ಕಾಗಿ ಬದುಕುವ ಸೈನಿಕರನ್ನು ಕಣ್ಣುಮುಂದೆ ನೋಡುತ್ತಿದ್ದೇವೆ. ಆದರೆ ಇವತ್ತು ನಾನೆ ಕುಟುಂಬ ಎಂಬ ಸೀಮಿತ ಪರಿದಿಗೆ ಬಂದ ದಿನದಲ್ಲಿ ದೇಶಕ್ಕಾಗಿ ಬದುಕುವ ಜನ ಕಡಿಮೆ ಆಗಿದ್ದಾರೆ. ಈ ದೇಶದ ಎಲ್ಲಾ ಜನರು ನಮ್ಮವರು ಎಂಬ ಭಾವನೆ ಕಡಿಮೆ ಆಗಿದೆ. ಇಂತಹ ಭಾವನೆಯನ್ನು ತೊಲಗಿಸಿ ಸರ್ವೆ ಜನಃ ಸುಖೀನ ಬವಂತು ಹೇಳುವ ವಿಚಾರದಡಿಯಲ್ಲಿ ಬದುಕಬೇಕಾಗಿದೆ. ಆಗ ಈ ದೇಶ ಬಲಿಷ್ಟ ಆಗುತ್ತದೆ. ಅದಕ್ಕಾಗಿ ನಾವೆಲ್ಲ ದೇಶಕ್ಕಾಗಿ ಬದುಕುವ ಎಂಬ ಸಂದೇಶ ಸ್ವೀಕಾರ ಮಾಡಬೇಕು ಎಂದರು.
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಪ್ರಜಾಪ್ರಭುತ್ವದ ಅಡಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಸುಂದರ ವ್ಯವಸ್ಥೆ ಕಲ್ಪಿಸಲಾಗಿದೆ. ಇಂತಹ ಅವಕಾಶ ಕಲ್ಪಿಸಿದ ಮಹಾತ್ಮರ ಆದರ್ಶವನ್ನು ಪಾಲಿಸಬೇಕೆಂದರು. ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ನಂದಿಲ, ಶಿವರಾಮ ಸಪಲ್ಯ, ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಡಿವೈಎಸ್‍ಪಿ ದಿನಕರ್ ಶೆಟ್ಟಿ, ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ತಾಲೂಕು ರಾಷ್ಟ್ರೀಯ ಹಬ್ಬಗಳ ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶಿಲ್ದಾರ್ ಡಾ. ಪ್ರದೀಪ್ ಕುಮಾರ್ ಸ್ವಾಗತಿಸಿ, ಉಪತಹಸೀಲ್ದಾರ್ ಶ್ರೀಧರ್ ಕೆ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.







