ಲಿಂಗೈಕರಾದ ಶ್ರೀಗಳಿಗೆ ಭಾರತರತ್ನ ನೀಡಲಿ: ಹೆಚ್.ಡಿ. ರೇವಣ್ಣ

ಹಾಸನ, ಜ. 26: ಇತ್ತಿಚಿಗೆ ಲಿಂಗೈಕರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಒತ್ತಡ ತರುವುದಾಗಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಸ್ವಾಮೀಜಿ ಎಂದರೇ ರಾಷ್ಟ್ರದಲ್ಲಿಯೇ ಮಾಧರಿಯಾಗಿದ್ದರು. ಆದರೇ ಇಂದು ನಮ್ಮ ಕಣ್ಣ ಮುಂದೆ ಇಲ್ಲ. ಎಲ್ಲಾ ಸಮಾಜದವರಿಗೆ ವಿದ್ಯಧ್ಯಾನ ಮಾಡಿದ ಕೀರ್ತಿ ಸಲ್ಲುತ್ತದೆ. ಜಗತ್ತೇ ಮೆಚ್ಚುವಂತೆ ಜೀವನ ನಡೆಸಿದ್ದವರು ಇವರ ಜೀವನ ಪದ್ದತಿ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿದೆ. ಸಿದ್ದಗಂಗಾಶ್ರೀಗಳಿಗೆ ಕೇಂದ್ರ ಸರ್ಕಾರ
ಭಾರತ್ನ ರತ್ನ ಘೋಷಿಸಲು ರಾಜ್ಯ ಸರ್ಕಾರದ ಮೂಲಕ ಒತ್ತಡ ಹೇರಲಾಗುವುದು ಎಂದ ಅವರು ಇದರಲ್ಲಿ ರಾಜಕೀಯ ಮಾಡುವುದು ತರವಲ್ಲ ಎಂದರು. ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಾಲ್ಕೈದು ಜನ ಸಚಿವರು ಹೋಗಿದ್ದು, ಅಲ್ಲಿ ಯಾವುದೆ ಗುಂಡಿಗಳು ಇಲ್ಲ. ಟ್ರಾಫಿಕ್ ವ್ಯವಸ್ಥೆ, ರಸ್ತೆಗಳ ನಿರ್ಮಾಣ ಅವಶಕ್ಯವಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬೆಂಗಳೂರು-ಮೈಸೂರು, ಹುಬ್ಬಳ್ಳಿ-ಬೆಳಗಾಂ ರಸ್ತೆಗಳನ್ನು ಆಸ್ಟ್ರೇಲಿಯಾ ಮಾದರಿಯಲ್ಲಿ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಒತ್ತಾಯ ಮಾಡಲಾಗುವುದು. ಇಲ್ಲವಾದರೆ ನಮ್ಮ ಇಲಾಖೆಯ ಲ್ಲಿರುವ ಹಣದಲ್ಲಿಯೇ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.ಇನ್ನೊಂದು ವಾರದಲ್ಲಿ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭವಾಗಲಿದ್ದು, ಲೋಕಪಯೋಗಿ ಇಲಾಖೆಯಿಂದಲೇ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಶಾಸಕರ ನಡುವೆ ಮಾತನಾಡಿದ ಸಚಿವರು ಬಿ.ಎಂ ರಸ್ತೆ ಅಗಲೀಕರಣಕ್ಕೆ ತೆರವು ವಿಚಾರದಲ್ಲಿ ಹಕ್ಕು ಚ್ಯತಿ ಮಂಡಿಸುತ್ತೇನೆ ಎಂದರು. ಅದಕ್ಕೆ ನಾನು ನೀವು ಹೊಸ ಶಾಸಕರು ಗೊತ್ತಾಗಲ್ಲ ಸುಮ್ಮನಿರೀ ಎಂದು ಸಲಹೆ ನೀಡಿದ್ದೇನೆ ಆದರೆ ಶಾಸಕರು ಅಭಿವೃದ್ಧಿ ವಿಚಾರವಾಗಿ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಮೈತ್ರಿ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಈಬಗ್ಗೆ ದೊಡ್ಡವರಿದ್ದಾರೆ ನಮ್ಮ ಕೆಲಸಗಳಿಗೇ ಸಮಯವಿಲ್ಲ ಅವರ ಹೇಳಿಕೆಗೆಲ್ಲಾ ಪ್ರತಿಕ್ರಿಯಿಸಲ್ಲ ಎಂದು ಟಾಂಗ್ ನೀಡಿದರು. ಇನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರಿಂಗ್ ಅವರಿಗೆ ನೋಟಿಸ್ ವಿಚಾರವಾಗಿ ಪ್ರತಿಯಿಸಿದ ನಾನು ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ರಸ್ತೆ ಕಾಮಗಾರಿಗೆ ಮುಂದಾಗಿದ್ದೇನೆ. ಎಲ್ಲವೂ ಕಾನೂನು ಚೌಕಟ್ಟಿನೊಳಗೆ ಮಾಡಲಾಗಿದೆ. ಇದು ರೇವಣ್ಣ - ತಿಮ್ಮಣ್ಣ ಮಾಡುವ ಕೆಲಸವಲ್ಲ ರಾಷ್ಟೀಯ ಹೆದ್ದಾರಿ ಇಲಾಖೆಗೆ ಅನುಮತಿ ನೀಡಿದೆ. ಜಿಲ್ಲಾಧಿಕಾರಿ ಅವರ ಕೆಲಸ ಮಾಡಿದ್ದಾರೆ. ನಾನು ಜನರ ಹಿತದೃಷ್ಟಿಯಿಂದ ಟ್ರಾಫಿಕ್ ಸಮಸ್ಯೆ ನಿವಾರಿಸಲು ರಸ್ತೆ ಅಗಲೀಕರಣ ಮಾಡಲು ಮುಂದಾಗಿದ್ದೇನೆ. ಹಲವು ಜನರು ರಸ್ತೆಗೆ ಕಟ್ಟಡಗಳನ್ನು ಕಟ್ಟಿಕೊಂಡರೆ ನಾನೇನು ಮಾಡಲಿ ಎಂದು ಉತ್ತರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸುಪ್ರದೀಪ್ತ್ ಯಜಮಾನ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, 6 ತಿಂಗಳಿಂದ ಮರಳು ಸಂಗ್ರಹಣೆ ಆಗುವವರೆಗೂ ಅಧಿಕಾರಿಗಳು ಏನೂ ಮಾಡುತ್ತಿದ್ದರು. ಇದನ್ನು ತಡೆಯಲು ಜಿಲ್ಲಾಧಿಕಾರಿಗಳೇ ಅಲ್ಲಿಗೆ ಹೋಗಬೇಕಿತ್ತ. ಇದರಲ್ಲಿ ಸುಪ್ರದೀಪ್ ಏನು ಪಾತ್ರ ಅಧಿಕಾರಿಗಳ ಬೆಜಬ್ದಾರಿತನ ಕಂಡು ಬರುತ್ತಿದೆ ಉತ್ತರಿಸಿದರು. ರಾಜ್ಯದಲ್ಲಿ ಸುಮಾರು 9 ಜಿಲ್ಲೆಗಳಲ್ಲಿ ಆಲೂಗೆಡ್ಡೆ ಬೆಳೆಯನ್ನು ಬೆಳೆಯಾಗುತ್ತದೆ. ಆ ಕಾರಣಕ್ಕಾಗಿ ರೈತರಿಗೆ ಬಿತ್ತನೆ ಬೀಜ ಸಬ್ಸಿಡಿ ದರದಲ್ಲಿ ಸಿಗುವಂತೆ ಕ್ರಮ ವಹಿಸಲಾಗುವುದು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. 3-4 ಪ್ಯಾಕೇಜ್ ಮಾಡಿ ಆಲೂಬಿತ್ತನೆ ಬೀಜ ವಿತರಣೆಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ರೈತರ ಹಿತದೃಷ್ಟಿಯಿಂದ ಸ್ಥಳೀಯ ಅಧಿಕಾರಿಗಳು ಲೋಪ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಇನ್ನು ಶೀಘ್ರದಲ್ಲಿ ಆರೋಗ್ಯ, ಉದ್ಯೋಗ, ಕೃಷಿ ಮೇಳಗಳನ್ನು ಆಯೋಜಿಸಲಾಗುವುದು.ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದ ಅವರು, ಈಗಾಗಲೇ ಮಂಜೂರಾಗಿರುವ ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ನಿರ್ಮಾಣ ಶೀಘ್ರದಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.







