ಹುತಾತ್ಮರ ಸ್ಮಾರಕಕ್ಕೆ ಜಯಮಾಲಾ ಗೌರವ

ಉಡುಪಿ, ಜ.26: ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕಕ್ಕೆ ಶನಿವಾರ ಗೌರವ ಸಲ್ಲಿಸಿದರು.
ಸೈನಿಕರು ರಾತ್ರಿ ಹಗಲು ಎನ್ನದೇ ತಮ್ಮ ಪ್ರಾಣವನ್ನು ಅರ್ಪಿಸಿ ದೇಶವನ್ನು ಕಾಪಾಡುತ್ತಾರೆ. ಇವರ ಸೇವೆಯನ್ನು ನಾವು ಗೌರವಿಸಬೇಕು ಎಂದು ಸಚಿವೆ ಜಯಮಾಲಾ ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ, ಮಾಜಿ ಸೈನಿಕರ ವೇದಿಕೆಯ ಗೌರವಾಧ್ಯಕ್ಷ ಕರ್ನಲ್ ರಾಮಚಂದ್ರ ರಾವ್, ಅಧ್ಯಕ್ಷ ರೊಡ್ರಿಗಸ್, ಕಾರ್ಯದರ್ಶಿ ಗಣೇಶ ರಾವ್, ಪರಮೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.
Next Story





