ಪಂಚಲೋಹ ವಿಗ್ರಹವೆಂದು ನಂಬಿಸಿ ಮಾರಾಟಕ್ಕೆ ಸಂಚು ಪ್ರಕರಣ: ಇಬ್ಬರ ಬಂಧನ
ಮಂಗಳೂರು, ಜ.26: ಪಂಚಲೋಹದ ವಿಗ್ರಹವೆಂದು ನಂಬಿಸಿ ಎರಡು ಕೋಟಿ ರೂ. ವೌಲ್ಯಕ್ಕೆ ಮಾರಾಟಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುಳ್ಯ ನಿವಾಸಿ ಸುಬ್ರಹ್ಮಣ್ಯ ಭಟ್ (45) ಮತ್ತು ಕೊಲ್ಲಂ ನಿವಾಸಿ ನಿಸಾರ್(54) ಎಂಬವರು ಪ್ರಕರಣದ ಆರೋಪಿಗಳು.
ನಗರದ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಸುಳ್ಯದ ಸುಬ್ರಹ್ಮಣ್ಯ ಭಟ್ ಮತ್ತು ಕೊಲ್ಲಂನ ನಿಸಾರ್ ಸೇರಿಕೊಂಡು ಕರೆ ಮಾಡಿ ‘ಸುಮಾರು ಎರಡು ಕೋಟಿ ರೂ. ವೌಲ್ಯದ ಪಂಚಲೋಹ ವಿಗ್ರಹ ಮಾರಾಟಕ್ಕಿದೆ’ ಎಂದು ನಂಬಿಸಿ ಮಾರಾಟಕ್ಕೆ ಸಂಚು ರೂಪಿಸಿದ್ದರು. ಈ ವಿಗ್ರಹದ ೆಟೋಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ವ್ಯಕ್ತಿಯೂ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಿಎಸ್ಸೈ ಕಬ್ಬಾಳ್‌ರಾಜ್ ಮತ್ತು ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ.
ಪ್ರಕರಣ ವಿವರ: ವ್ಯಕ್ತಿಯೊಬ್ಬರು ನಗರದ ವ್ಯಾಪಾರಿಯಿಂದ ನಾಲ್ಕು ಲಕ್ಷ ರೂ.ಗೆ ಕಂಚಿನ ವಿಗ್ರಹವೊಂದನ್ನು ಖರೀದಿಸಿದ್ದರು. ಆದರೆ ಬಳಿಕ ಆ ಮೂರ್ತಿಯಿಂದ ಅಸಮಾಧಾನಗೊಂಡ ವ್ಯಕ್ತಿ ಅದನ್ನು ಕಾರ್‌ಸ್ಟ್ರೀಟ್‌ನ ಅಂಗಡಿಯೊಂದಕ್ಕೆ 30ಸಾವಿರ ರೂ.ಗೆ ಮಾರಿದ್ದರು. ಇದರ ಬಗ್ಗೆ ತಿಳಿದ ಆರೋಪಿ ಗಳು ಆ ಮೂರ್ತಿಯನ್ನು 60 ಸಾವಿರ ರೂ.ಗೆ ಖರೀದಿಸಿ ಅದನ್ನು ಪಂಚಲೋಹ ವಿಗ್ರಹವೆಂದು ನಂಬಿಸಿ ಮಾರಾಟಕ್ಕೆ ಸಂಚು ರೂಪಿಸುತ್ತಿದ್ದರು.
ನಗರದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಆರೋಪಿಗಳು ವ್ಯವಹಾರ ಕುದುರಿಸುವ ಬಗ್ಗೆ ಮಾತನಾಡಿದ್ದರು. ಅದರಂತೆ ಅವರು ಕಾರಿನಲ್ಲಿ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ಭಾಸ್ಕರ್ ಒಕ್ಕಲಿಗ ಮಾರ್ಗದರ್ಶನದಂತೆ ಕಾರ್ಯಾಚರಣೆಯಲ್ಲಿ ಪಿಎಸ್ಸೈ ಕಬ್ಬಾಳ್‌ರಾಜ್, ಆಶೀತ್ ರಾಜ್, ಮಣಿ ಹಾಗೂ ಪಾಂಡೇಶ್ವರ ಇನ್‌ಸ್ಪೆಕ್ಟರ್ ಮುಹಮ್ಮದ್ ಶರ್ೀ, ಪಿಎಸ್ಸೈ ರಾಜೇಂದ್ರ ಭಾಗವಹಿಸಿದ್ದರು.







