ಸರ್ಕಾರಿ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುತ್ತಿದೆ: ನಾಗರಾಜ ಭಟ್

ಭಟ್ಕಳ, ಜ. 26 ಪ್ರಜಾತಂತ್ರ ಗಣರಾಜ್ಯ ವ್ಯವಸ್ಥೆಯಲ್ಲಿ ನಾವೆಲ್ಲರೂ ಸರಿಸಮಾನರು. ಸರ್ಕಾರವು ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡುತ್ತಿದ್ದು ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುತ್ತಿದ್ದು ಈ ನಿಟ್ಟಿನಲ್ಲಿ ಬೇಂಗ್ರೆ ಶಾಲೆಯು ಒಂದು ಹೆಜ್ಜೆ ಮುಂದಿದೆ ಎಂದು ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾಗರಾಜ ಭಟ್‍ರವರು ಹೇಳಿದರು.
ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇಂಗ್ರೆಯಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಥಿತಿಗಳಾದ ಡಾ.ಆಯ್.ಆರ್ ಭಟ್ ಗಣರಾಜ್ಯ ದಿನದ ಮಹತ್ವವನ್ನು ತಿಳಿಸಿದರು. ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಲಯನ್ ಸದಸ್ಯರಾದ ಡಾ. ಸುನೀಲ್ ಜತ್ತನ್‍ರವರು ಪರಿಸರ ಸ್ನೇಹಿ ಪೆನ್ ಹಾಗೂ ಔಷಧೀಯ ಸಸ್ಯಗಳನ್ನು ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸಿ ಈ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಾಸ್ತಪ್ಪ ನಾಯ್ಕ, ಗ್ರಾಮ ಪಂಚಾಯತ ಸದಸ್ಯರಾದ ಮಂಜಮ್ಮ ನಾಯ್ಕ, ಲಯನ್ ಖಜಾಂಚಿ ಜಗದೀಶ ಜೈನ್ ಉಪಸ್ಥಿತರಿದ್ದರು.
ಶಿಕ್ಷಕಿ ಕರುಣಾ ಕಾಮತ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಲಯನ್ ಸದಸ್ಯರಾದ ಡಾ.ವಾಧಿರಾಜ ಭಟ್, ಎಮ್.ವಿ ಹಗಡೆ, ಎ.ಎನ್ ಶೆಟ್ಟಿ, ಬಾಬು ಮೊಗೇರ್, ಗಜಾನನ ಶೆಟ್ಟಿ, ಮಂಜುನಾಥ ದೇವಾಡಿಗ, ವಿಶ್ವನಾಥ ಶೆಟ್ಟಿ, ಫಿಲಿಫ್ ಅಲ್ಮೇಡಾ, ಗೌರೀಶ ನಾಯ್ಕ, ಕಿರಣ್ ಕಾಯ್ಕಿಣಿ, ವಿಶ್ವನಾಥ ಮಡಿವಾಳ ಮಾಜಿ ಎಸ್.ಡಿ.ಎಮ್.ಸಿ ಸದಸ್ಯರಾದ ತಿಮ್ಮಪ್ಪ ನಾಯ್ಕ, ಶಂಕರ ನಾಯ್ಕ, ಊರ ನಾಗರಿಕರು ಹಾಜರಿದ್ದರು.
ಈ ವೇಳೆ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ಕ್ರೀಡೋಪಕರಣ, ಗೋಡೆ ಗಡಿಯಾರ, ಹತ್ತು ಖುರ್ಚಿಗಳನ್ನು ವಿತರಿಸಲಾಯಿತು. ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್‍ಬುಕ್, ಪೆನ್, ಪೆನ್ಸಿಲ್, ಕ್ರೇಯಾನ್ಸ್, ರೈಟಿಂಗ್ ಪ್ಯಾಡ್, ಸೋಪ್, ಪೇಸ್ಟ್, ವಾಟರ್ ಬಾಟಲ್ ಹಾಗೂ ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು.










