ಏಶ್ಯಕಪ್ ಫುಟ್ಬಾಲ್: ಮಾಬ್‌ಕೌಟ್ ಗೋಲು: ಆಸೀಸ್ ಹೊರಕ್ಕೆ, ಯುಎಇ ಸೆಮಿಗೆ
ಅಬುಧಾಬಿ, ಜ.26: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಏಶ್ಯಕಪ್ ಫುಟ್ಬಾಲ್ ಟೂರ್ನಿಯಿಂದ ೊರಬಿದ್ದಿದೆ. ಶುಕ್ರವಾರ ತಡರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಲಿ ಮಾಬ್‌ಕೌಟ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಆತಿಥೇಯ ಯುಎಇ ತಂಡ ಆಸ್ಟ್ರೇಲಿಯವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇಲ್ಲಿ ನಡೆದ ಪಂದ್ಯದಲ್ಲಿ ಯುಎಇ ಪರ ಅಲಿ ಮಾಬ್‌ಕೌಟ್ 68ನೇ ನಿಮಿಷದಲ್ಲಿ ಗೋಲು ಗಳಿಸಿ ಆಸ್ಟ್ರೇಲಿಯವನ್ನು ಹೊರದಬ್ಬಲು ನೆರವಾದರು. ಇದು ಅಲಿ ಆಡುತ್ತಿರುವ ಎರಡನೇ ಏಶ್ಯಕಪ್ ಟೂರ್ನಿಯಾಗಿದ್ದು, ಈ ಎರಡೂ ಟೂರ್ನಿಗಳಲ್ಲಿ ಅವರು ಒಟ್ಟು 9 ಗೋಲು ಗಳಿಸಿದ್ದಾರೆ. ಮುಂದಿನ ವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಯುಎಇ ತಂಡ ಕತರ್‌ನ್ನು ಎದುರಿಸಲಿದೆ.
Next Story





