ರಾಹುಲ್ ಗಾಂಧಿಗೆ ದಕ್ಷಿಣ ಆಫ್ರಿಕ ದೇಶಕ್ಕೆ ಆಹ್ವಾನ

ಹೊಸದಿಲ್ಲಿ, ಜ.27: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದಕ್ಷಿಣ ಆಫ್ರಿಕ ದೇಶಕ್ಕೆ ಭೇಟಿ ನೀಡುವಂತೆ ಅಲ್ಲಿನ ಅಧ್ಯಕ್ಷ ಸಿರಿಲ್ ರಾಮಫೋಸ ಆಹ್ವಾನ ನೀಡಿರುವುದಾಗಿ ಕಾಂಗ್ರೆಸ್ ನ ಹಿರಿಯ ನಾಯಕ ಆನಂದ್ ಶರ್ಮಾ ತಿಳಿಸಿದ್ದಾರೆ..
ರಾಹುಲ್ ಗಾಂಧಿ ಅವರು ದಕ್ಷಿಣ ಆಫ್ರಿಕ ಅಧ್ಯಕ್ಷರ ಆಹ್ವಾನ ಸ್ವೀಕರಿಸಿದ್ದಾರೆ. ಉಭಯ ದೇಶಗಳ ವಿದೇಶಾಂಗ ವ್ಯವಹಾರಗಳ ಇಲಾಖೆಯು ರಾಹುಲ್ ಗೆ ಆಫ್ರಿಕ ಭೇಟಿ ನೀಡಲು ಅಗತ್ಯದ ತಯಾರಿಯನ್ನು ನಡೆಸಲಿದೆ.
ದಕ್ಷಿಣ ಆಫ್ರಿಕ ಅಧ್ಯಕ್ಷ ಸಿರಿಲ್ ರಾಮಫೋಸ ಕಳೆದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿದ್ದರು. ಅವರನ್ನು ಶನಿವಾರ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.
Next Story