2008ರ ಅಸ್ಸಾಂ ಸರಣಿ ಬಾಂಬ್ ಸ್ಫೋಟ ಪ್ರಕರಣ: ರಂಜನ್ ಡೈಮಾರಿ ಸೇರಿ 15 ಮಂದಿ ದೋಷಿಗಳು
81 ಜನರ ಸಾವಿಗೆ ಕಾರಣವಾದ ಸ್ಫೋಟ
![2008ರ ಅಸ್ಸಾಂ ಸರಣಿ ಬಾಂಬ್ ಸ್ಫೋಟ ಪ್ರಕರಣ: ರಂಜನ್ ಡೈಮಾರಿ ಸೇರಿ 15 ಮಂದಿ ದೋಷಿಗಳು 2008ರ ಅಸ್ಸಾಂ ಸರಣಿ ಬಾಂಬ್ ಸ್ಫೋಟ ಪ್ರಕರಣ: ರಂಜನ್ ಡೈಮಾರಿ ಸೇರಿ 15 ಮಂದಿ ದೋಷಿಗಳು](https://www.varthabharati.in/sites/default/files/images/articles/2019/01/28/175053.jpg)
ಹೊಸದಿಲ್ಲಿ, ಜ.28: 81 ಜನರ ಸಾವಿಗೆ ಕಾರಣವಾದ 2008ರ ಅಸ್ಸಾಂ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಶನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ ಡಿಎಫ್ ಬಿ) ಸ್ಥಾಪಕ ರಂಜನ್ ಡೈಮಾರಿ ಮತ್ತು ಇತರ 14 ಮಂದಿ ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪಿತ್ತಿದೆ.
2008ರ ಅಕ್ಟೋಬರ್ 30ರಂದು ಈ ಸರಣಿ ಸ್ಫೋಟ ಸಂಭವಿಸಿತ್ತು. ಗುವಾಹಟಿಯ ಮಾರುಕಟ್ಟೆ ಮತ್ತು ಪಶ್ಚಿಮ ಅಸ್ಸಾಂನ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 18 ಬಾಂಬ್ ಗಳು ಸ್ಫೋಟಗೊಂಡಿತ್ತು. ಈ ಸ್ಫೋಟಗಳಲ್ಲಿ 81 ಮಂದಿ ಮೃತಪಟ್ಟು 470 ಮಂದಿ ಗಾಯಗೊಂಡಿದ್ದರು.
Next Story