ಸಿಎಂ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು, ಜ. 28: ‘ನಾನು ರಾಜೀನಾಮೆ ನೀಡಲು ಸಿದ್ಧ’ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಟ್ವಿಟ್ಟರ್ ಮೂಲಕ ಟೀಕಿಸಿರುವ ಬಿಜೆಪಿ, ‘ಕರ್ನಾಟಕ ನಾಟಕ’ ಕಥೆ, ನಿರ್ಮಾಣ ಮತ್ತು ನಿರ್ದೇಶನ ಸಿಎಂ ಎಚ್.ಡಿ.ಕುಮಾರಸ್ವಾಮಿ’ ಎಂದು ಲೇವಡಿ ಮಾಡಿದೆ.
‘ಕಥೆ-1: ನಾನು ವಿಷಕಂಠ, ಕಥೆ-2: ನಾನು ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೇನೆ. ಕಥೆ-3: ಸಾವಿನ ಅಂಚಿನಲ್ಲಿದ್ದೇನೆ. ಕಥೆ-4 ಸಿಂಗಾಪೂರನಲ್ಲಿ ಹೊಸ ವರ್ಷದ ಪಾರ್ಟಿ, ಕಥೆ-5: ಸೀತಾರಾಮಕಲ್ಯಾಣ ಸಿನಿಮಾ ನೋಡಿದ್ದು. ಕಥೆ-6: ರಾಜೀನಾಮೆ ನೀಡ್ತೀನಿ’ ಎಂದು ಟ್ವಿಟ್ಟರ್‌ನಲ್ಲಿ ಬಿಜೆಪಿ ವ್ಯಂಗ್ಯ ಮಾಡಿದೆ.
Next Story





