ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಕೋಟ, ಜ. 28: ವೈಯಕ್ತಿಕ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡ ಅಕ್ಷಯ (23) ಎಂಬವರು ಜ.27ರಂದು ರಾತ್ರಿ ವೇಳೆ ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ವ್ಯವಹಾರದಲ್ಲಿ ಉಂಟಾದ ನಷ್ಟ ಹಾಗೂ ಸಾಲದಿಂದ ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಪೆಜಮಂಗೂರು ಗ್ರಾಮದ ಒಳಬೈಲು ನಿವಾಸಿ ವಿಜಯ(34) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜ.27ರಂದು ರಾತ್ರಿ ವೇಳೆ ಮಲಗುವ ಕೋಣೆಯ ಗೋಡೆಗೆ ಅಳವಡಿಸಿದ ಕಬ್ಬಿಣದ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





