ಗಾಂಜಾ ಸೇವನೆ: ಐವರ ಬಂಧನ
ಕಾರ್ಕಳ, ಜ.28: ಆನೆಕೆರೆ ಬಾಟಾ ಶೋ ರೂಂನ ಹಿಂಬದಿ ಜ.27ರಂದು ಮಧ್ಯಾಹ್ನ 12.30ರ ಸುಮಾರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ಐವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಆನೆಕೆರೆಯ ಸುನೀಲ್(28), ಸಾಲ್ಮರದ ಶ್ರೀಕಾಂತ್(19), ಬಂಗ್ಲೆಗುಡ್ಡೆಯ ಸೈಯದ್ ಇಮ್ತಿಯಾಜ್(24), ಶಿವಮೊಗ್ಗ ಸಾಗರದ ಝೀಶಾನ್ (21), ಬಂಗ್ಲೆಗುಡ್ಡೆಯ ಮೊಹಮ್ಮದ್ ಆಕೀಪ್(19) ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





