ಮಂಗಳೂರು: ಟ್ಯಾಲೆಂಟ್‍ನಲ್ಲಿ ಗಣರಾಜ್ಯೋತ್ಸವ

ಮಂಗಳೂರು, ಜ. 28: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ವಿಶ್ವಾಸ್ ಬಾವಾ ಬಿಲ್ಡರ್ಸ್ ವತಿಯಿಂದ 70ನೇ ಗಣರಾಜ್ಯೋತ್ಸವವನ್ನು ಟ್ಯಾಲೆಂಟ್‍ನಲ್ಲಿ ಆಚರಿಸಲಾಯಿತು.
ಪನೀರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಯಾಸರ್ ಅರಾಫತ್ ಕೌಸರಿ, ಸಿ.ಐ.ಟಿ.ಯು ದ.ಕ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮತ್ತು ಉದ್ಯಮಿ ಲಾಯ್ ಫ್ರಾಂಕ್ ಜೊತೆಯಾಗಿ ಧ್ವಜಾರೋಹಣಗೈದು ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವಾಸ್ ಎಸ್ಟೇಟ್‍ನ ಪಾಲುದಾರ ಸುಲೈಮಾನ್ ಶೇಖ್ ಬೆಳುವಾಯಿ, ಅಬ್ದುಲ್ ಅಝೀಝ್ ಅಶ್ರಫಿ ಕೊಯ್ಯೂರು, ಆಪತ್ಬಾಂಧವ ಆಸಿಫ್ ಸಾಣೂರು, ವಿಶ್ವಾಸ್ ಬಾವಾ ಬಿಲ್ಡರ್ಸ್‍ನ ಪ್ರಧಾನ ವ್ಯವಸ್ಥಾಪಕ ಯೂಸುಫ್ ಹಸನ್, ಅಬ್ದುಲ್ ಹಮೀದ್, ಅತಾವುಲ್ಲಾ, ಶರೀಫ್, ಅಬ್ದುಲ್ಲ, ರೇಗನ್, ರಮ್ಯ, ಶಾಂತಿ, ವಸುಧಾ, ಜ್ಯೋತಿ, ಟ್ಯಾಲೆಂಟ್‍ನ ಸದಸ್ಯರಾದ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಮಜೀದ್ ತುಂಬೆ, ಬಡಿಲ ಹುಸೈನ್, ಆಸರೆ ವಿಮೆನ್ಸ್ ಫೌಂಡೇಶನ್‍ನ ಉಪಾಧ್ಯಕ್ಷೆ ಆತಿಕಾ ರಫೀಕ್, ಸದಸ್ಯೆ ಹಾಜಿರಾ, ವಿಶ್ವಾಸ್ ಕ್ರೌನ್ ಅಸೋಸಿಯೇಷನ್ ಕೋಶಾಧಿಕಾರಿ ಅಮಾನುಲ್ಲಾ, ಗೋಲ್ಡ್ ಹೌಸ್‍ನ ಅಬ್ದುಲ್ ಖಾದರ್, ಎಸ್.ಕೆ.ಫಾರ್ಮಾದ ಝಾಕಿರ್, ಫ್ಲಾಟ್ ನಿವಾಸಿಗಳು, ಅಂಗಡಿ ಮಾಲಕರು ಮೊದಲಾದವರು ಉಪಸ್ಥಿತರಿದ್ದರು.
ಟಿ.ಆರ್.ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ರಾಷ್ಟ್ರಗೀತೆ ಹಾಡಿದರು. ಸದಸ್ಯ ನಕಾಶ್ ಬಾಂಬಿಲ ವಂದಿಸಿದರು. ಶಾಹಿದ್ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.





