ನಾಟೆಕಲ್: ದಂಪತಿ ಮೇಲೆ ತಂಡದಿಂದ ಹಲ್ಲೆ

ಕೊಣಾಜೆ, ಜ. 28: ಕೊಣಾಜೆ ಠಾಣಾ ವ್ತಾಪ್ತಿಯ ನಾಟೆಕಲ್ ಬಳಿ ಯುವಕರ ತಂಡವೊಂದು ಡ್ರೈವಿಂಗ್ ಸ್ಕೂಲ್‍ನ ಶಿಕ್ಷಕ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಸ್ಮಾರ್ಟ್ ಮೋಟಾರ್ ಡ್ರೈವಿಂಗ್ ಸ್ಕೂಲ್‍ನ ಥಾಮಸ್ ಹಾಗೂ ಅವರ ಪತ್ನಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಅದೇ ಕಾರಿನಲ್ಲಿ ಕಾರು ತರಬೇತಿಗೆಂದು ಮಹಿಳೆಯೂ ಕುಳಿತಿದ್ದು, ಇದನ್ನು ಗಮನಿಸಿದ ತಂಡವೊಂದು ಕಾರನ್ನು ನಾಟೆಕಲ್ ಬಳಿ ನಿಲ್ಲಿಸಿ ಬಳಿಕ ಕಾರಿನ ಗಾಜು ಪುಡಿಗೈದು ಹಾನಿಗೊಳಿಸಿದ್ದಾರೆ. ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಥಾಮಸ್‍ಗೆ ಹಲ್ಲೆ ನಡೆಸಿದ ತಂಡ ಅವರ ಪತ್ನಿಗೂ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತು.. ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ಸಂದರ್ಭ ಸ್ಥಳೀಯರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಸಿಪಿ ರಾಮರಾವ್, ಕೊಣಾಜೆ ಠಾಣಾಧಿಕಾರಿ ರವೀಶ್ ನಾಯಕ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.





