ಕಿವೀಸ್ ತಂಡಕ್ಕೆ ಮರಳಿದ ನೀಶಾಮ್, ಆ್ಯಶ್ಲೆ

ವೌಂಟ್ ವೌಂಗನೂಯಿ, ಜ.28: ಭಾರತದ ವಿರುದ್ಧ ಸತತ ಮೂರು ಏಕದಿನ ಪಂದ್ಯಗಳನ್ನು ಸೋತಿರುವ ನ್ಯೂಝಿಲೆಂಡ್ ತಂಡ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಗೆ ಆಲ್‌ರೌಂಡರ್ ಜಿಮ್ಮಿ ನೀಶಾಮ್ ಹಾಗೂ ಲೆಗ್‌ಸ್ಪಿನ್ನರ್ ಟಾಡ್ ಆ್ಯಶ್ಲೆಗೆ ಕರೆ ನೀಡಿದೆ.
ರನ್ ಗಳಿಸಲು ಪರದಾಡುತ್ತಿರುವ ಆರಂಭಿಕ ದಾಂಡಿಗರಾದ ಕಾಲಿನ್ ಮುನ್ರೊ ಹಾಗೂ ಮಾರ್ಟಿನ್ ಗಪ್ಟಿಲ್ ರನ್ನು ಮುಂದುವರಿಸಲು ಕಿವೀಸ್ ನಿರ್ಧರಿಸಿದೆ.
ಗಪ್ಟಿಲ್ ಹಾಗೂ ಮುನ್ರೊ ಮೂರನೇ ಪಂದ್ಯದಲ್ಲಿ 10 ರನ್‌ಗಳ ಜೊತೆಯಾಟ ನೀಡಿದರೆ, ಮೊದಲ ಹಾಗೂ ಎರಡನೇ ಪಂದ್ಯದಲ್ಲಿ ಕ್ರಮವಾಗಿ 23 ಹಾಗೂ 5 ರನ್‌ಗಳ ಆರಂಭಿಕ ಜೊತೆಯಾಟ ನೀಡಿದ್ದರು.
ಕಳೆದ ನವೆಂಬರ್‌ನಲ್ಲಿ ಮೊಣಕಾಲು ನೋವಿನಿಂದಾಗಿ ಆ್ಯಶ್ಲೆ ಪಾಕಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನದಿಂದ ಗಮನ ಸೆಳೆಸಿದ್ದ ನೀಶಾಮ್ ಮಂಡಿನೋವಿನ ಕಾರಣ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.
Next Story





