ಅಯೋಧ್ಯೆಯ ಹೆಚ್ಚುವರಿ ಭೂಮಿಯನ್ನು ರಾಮ ಜನ್ಮಭೂಮಿ ನ್ಯಾಸ್ ಸಮಿತಿಗೆ ನೀಡಲು ಸುಪ್ರೀಂಗೆ ಕೇಂದ್ರ ಸರಕಾರ ಮನವಿ
ಹೊಸದಿಲ್ಲಿ, ಜ.29: ಅಯೋಧ್ಯೆಯಲ್ಲಿ ವಿವಾದಿತ ಜಮೀನು ಹೊರತುಪಡಿಸಿ ಉಳಿದಿರುವ ಹೆಚ್ಚುವರಿ ಭೂಮಿಯನ್ನು ನ್ಯಾಸ್ ಸಮಿತಿಗೆ ಬಿಟ್ಟುಕೊಡುವಂತೆ ಕೇಂದ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
1993ರಲ್ಲಿ ವಿವಾದಿತ ಜಮೀನಿನ ಸುತ್ತಲಿನ 67 ಎಕ್ರೆ ಭೂಮಿಯನ್ನು ಕೇಂದ್ರ ಸರಕಾರ ವಶಪಡಿಸಿಕೊಂಡಿತ್ತು. ವಿವಾದಕ್ಕೆ ಸಂಬಂಧಿಸಿ ತೀರ್ಪು ಬರುವವರೆಗೆ ಈ ಭೂಮಿಯು ಕೇಂದ್ರ ಸರಕಾರದ ವಶದಲ್ಲಿರಲಿದೆ ಎಂದು 1994ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಕೇಂದ್ರ ಸರಕಾರ ಸ್ವಾಧೀನ ಪಡಿಸಿಕೊಂಡಿದ್ದ ವಿವಾದಿತ ಜಮೀನು ಹೊರತುಪಡಿಸಿ ಹೆಚ್ಚುವರಿ ಭೂಮಿಯನ್ನು ರಾಮ ಜನ್ಮಭೂಮಿ ನ್ಯಾಸ್ ಸಮಿತಿಗೆ ಹಿಂದಿರುಗಿಸಲು ಅನುಮತಿ ನೀಡುವಂತೆ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.
Next Story