ಇನ್ನು ಜಗತ್ತಿನ ಏಳು ಅದ್ಭುತಗಳನ್ನು ದಿಲ್ಲಿಯಲ್ಲಿ ನೋಡಲು ಸಾಧ್ಯ
(ಚಿತ್ರ ಕೃಪೆ: ಅನಿಂದ್ಯಾ ಛಟ್ಟೋಪಾಧ್ಯಾಯ, timesofindia.indiatimes.com)
ಹೊಸದಿಲ್ಲಿ, ಜ.30: ಪ್ರವಾಸಿಗರಿಗೆ ಜಗತ್ತಿನ ಏಳು ಅದ್ಭುತಗಳನ್ನು ನೋಡಲು ಹೆಚ್ಚು ದೂರ ಹೋಗಬೇಕಾಗಿಲ್ಲ. ದೇಶದ ರಾಜಧಾನಿ ದಿಲ್ಲಿಯಲ್ಲಿ ಜಗತ್ತಿನ ಏಳು ಅದ್ಬುತಗಳ ಮರು ಸೃಷ್ಠಿಯಾಗಿದೆ.
ಆಗ್ನೇಯ ದಿಲ್ಲಿಯ ಸರೈ ಕಾಲೆ ಖಾನ್ ಬಸ್ ನಿಲ್ದಾಣದ ಸಮೀಪ ವಿಶ್ವದ 7 ಅದ್ಬುತಗಳ ಪ್ರತಿಕೃತಿಗಳ ಪಾರ್ಕ್ ವಿಶ್ವದಲ್ಲೇ ಮೊದಲ ಬಾರಿ ತಲೆ ಎತ್ತಿದ್ದು, ಫೆ.9ರಿಂದ ಪ್ರವಾಸಿಗಳು ವಿಶ್ವದ ಏಳು ಅದ್ಭುತಗಳನ್ನು ನೋಡಲು ವಿಶ್ವದಾದ್ಯಂತ ಸುತ್ತಾಡಬೇಕಾಗಿಲ್ಲ.ದಿಲ್ಲಿಗೆ ಹೋದರೆ ಹೋದರೆ ಎಲ್ಲವೂ ಅಲ್ಲಿ ಲಭ್ಯ .
ದಕ್ಷಿಣ ದಿಲ್ಲಿಯ ಮುನ್ಸಿಪಲ್ ಕಾರ್ಪೋರೇಷನ್ ಪಾರ್ಕ್ ನ್ನು ಬೆಳಗಿಸಲು ವಿದ್ಯುತ್ ಗಾಗಿ ಹೊಸ ದಾರಿಯನ್ನು ಕಂಡು ಹಿಡಿದಿದೆ. ವಿಂಡ್ –ಸೋಲಾರ್ ವಿದ್ಯುತ್ ಮೂಲಕ ಜಗತ್ತಿನ 7 ಅದ್ಭುತಗಳ ಪಾರ್ಕ್ ಬೆಳಗಲಿದೆ.
ವಿಶ್ವದ ಅದ್ಬುತಗಳ ಪಾರ್ಕ್ ನಲ್ಲಿ ಆಗ್ರಾದ ತಾಜ್ ಮಹಲ್ , ಗೀಝಾದ ಮಹಾ ಪಿರಮಿಡ್, ಪ್ಯಾರಿಸ್ ನ ಐತಿಹಾಸಿಕ ಐಫೆಲ್ ಟವರ್ , ಪೀಸಾದ ವಾಲು ಗೋಪುರ , ರಿಯೊ ಡಿ ಜನೈರೊದ ಕ್ರೈಸ್ತ ರಿಡೀಮರ್ ಪ್ರತಿಮೆ , ರೋಮ್ ನ ಕೊಲೊಸ್ಸಿಯಮ್ ಮತ್ತು ನ್ಯೂಯಾರ್ಕ್ ನ ಏಕತಾ ಪ್ರತಿಮೆ ದಿಲ್ಲಿಯ ವಂಡರ್ ಪಾರ್ಕ್ ನಲ್ಲಿ ಎಲೆ ಎತ್ತಿವೆ. ಈ ಪಾರ್ಕ್ ಗೆ ಆಗಿರುವ ವೆಚ್ಚ 7.5 ಕೋಟಿ ರೂ.