ಹೊಸ ರಫೇಲ್ ಒಪ್ಪಂದಕ್ಕೂ ನನಗೂ ಸಂಬಂಧವಿಲ್ಲ ಎಂದು ಪಾರಿಕ್ಕರ್ ಹೇಳಿದರು
ಗೋವಾ ಸಿಎಂ ಭೇಟಿಯ ನಂತರ ರಾಹುಲ್ ಹೇಳಿಕೆ
![ಹೊಸ ರಫೇಲ್ ಒಪ್ಪಂದಕ್ಕೂ ನನಗೂ ಸಂಬಂಧವಿಲ್ಲ ಎಂದು ಪಾರಿಕ್ಕರ್ ಹೇಳಿದರು ಹೊಸ ರಫೇಲ್ ಒಪ್ಪಂದಕ್ಕೂ ನನಗೂ ಸಂಬಂಧವಿಲ್ಲ ಎಂದು ಪಾರಿಕ್ಕರ್ ಹೇಳಿದರು](https://www.varthabharati.in/sites/default/files/images/articles/2019/01/30/175373.jpg)
ಕೊಚ್ಚಿನ್, ಜ.30: ರಫೇಲ್ ಯುದ್ಧವಿಮಾನ ಖರೀದಿ ಸಂಬಂಧ ಹೊಸದಾಗಿ ಮಾಡಿಕೊಂಡಿರುವ ಒಪ್ಪಂದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಗೋವಾ ಸಿಎಂ, ಮಾಜಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ತಮ್ಮ ಬಳಿ ಸ್ಪಷ್ಟಪಡಿಸಿದ್ದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.
ಅನಾರೋಗ್ಯಪೀಡಿತರಾಗಿರುವ ಪಾರಿಕ್ಕರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿ ಮಾಡಿದರು.
"ಮಾಜಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು, ತಮಗೂ ಹೊಸ ರಫೇಲ್ ಒಪ್ಪಂದಕ್ಕೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ” ಎಂದವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರೇ ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಅವರು ಮೇಲಿನ ಸ್ಪಷ್ಟನೆ ನೀಡಿದ್ದಾಗಿ ರಾಹುಲ್ ವಿವರಿಸಿದರು. ಕೇರಳದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುವ ಸಲುವಾಗಿ ರಾಹುಲ್ ಆಗಮಿಸಿದ್ದಾರೆ.
ಆದರೆ ಪಾರಿಕ್ಕರ್ ಭೇಟಿ ವೇಳೆ ರಫೇಲ್ ಒಪ್ಪಂದದ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಅಂಶವನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.