“ಉಚಿತ ಸೆಕ್ಸ್ ಭರವಸೆಯನ್ನೂ ರಾಹುಲ್ ನೀಡುತ್ತಾರೆ” ಎಂದ ಮೋದಿಯ ಕಟ್ಟಾ ಅಭಿಮಾನಿ ಮಧು ಕಿಶ್ವರ್
ಅವರದೇ ಭಾಷೆಯಲ್ಲಿ ಝಾಡಿಸಿದ ಟ್ವಿಟರಿಗರು
ಹೊಸದಿಲ್ಲಿ, ಜ.30: ಫೇಸ್ ಬುಕ್ ನಲ್ಲಿರುವ 'ವಾಟ್ಸ್ ಆನ್ ಯುವರ್ ಮೈಂಡ್?' (ನಿಮ್ಮ ಮನಸ್ಸಿನಲ್ಲೇನಿದೆ) ಎಂಬುದು ಟ್ವಿಟರ್ ನಲ್ಲಿಲ್ಲ ನಿಜ, ಆದರೆ ನಮ್ಮ ಮನಸ್ಸಿನಲ್ಲೇನಿದೆ ಎಂದು ಯೋಚಿಸದೆ ಹೇಳಿಯೇ ಬಿಟ್ಟರೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಬಹುದೆಂಬುದಕ್ಕೆ ಮೋದಿಯ ಕಟ್ಟಾ ಅಭಿಮಾನಿ ಮಧು ಕಿಶ್ವರ್ ಅವರು ಮಾಡಿದ ಟ್ವೀಟ್ ಒಂದು ಸಾಕ್ಷಿಯಾಗಿದೆ.
“ಹಿಂದಿನ ಕಾಂಗ್ರೆಸ್ ಪಕ್ಷದ ಸರಕಾರ ಆಹಾರ ಭದ್ರತಾ ಕಾಯ್ದೆ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಗೋಧಿ ನೀಡಿದೆ. ಆದರೆ ಮನ್ ರೇಗಾ ಮತ್ತು ಆಹಾರ ಭದ್ರತಾ ಕಾಯ್ದೆಯೂ ಸಾಲದೆಂದರೆ ಏನೋ ತಪ್ಪಾಗಿದೆ'' ಎಂದು ಒಬ್ಬರು ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಮಧು ಕಿಶ್ವರ್ “ಪ್ರತಿ ವರ್ಷ ಕೆಲವೊಂದು ನಿರ್ದಿಷ್ಟ ದಿನಗಳಿಗೆ ಪ್ರತಿಯೊಬ್ಬ ವಯಸ್ಕ ಪುರುಷನಿಗೆ ರಾಹುಲ್ ಗಾಂಧಿ ಉಚಿತ ಸೆಕ್ಸ್ ಭರವಸೆ ನೀಡುವ ತನಕ ಕಾಯಿರಿ'' ಎಂದು ಉತ್ತರಿಸಿದ್ದರು.
ಈ ಉತ್ತರ ಯಾರಿಗೂ ಪಥ್ಯವಾಗಲಿಕ್ಕಿಲ್ಲ ಎಂಬುದನ್ನು ಬೇರೆ ವಿವರಿಸಿ ಹೇಳಬೇಕಾಗಿಲ್ಲ. "ಮಧು ಕಿಶ್ವರ್ ಆವರಿಂದ ಇಂತಹ ಒಂದು ಟ್ವೀಟ್ ಬರಬಹುದೆಂದು ಯಾರೂ ನಿರೀಕ್ಷಿಸಿರಲೂ ಇಲ್ಲ", “ಇದನ್ನು ಬರೆದವರು ನೀವೆಂದು ನಂಬಲು ಸಾಧ್ಯವಿಲ್ಲ'' ಎಂದು ಒಬ್ಬರು ಟ್ವೀಟ್ ಮಾಡಿದರೆ ಇನ್ನೊಬ್ಬರು ``ನೀವು ಯಾವತ್ತೂ ಸೆಕ್ಸ್ ಗೆ ಹಣ ಪಾವತಿಸಿದ್ದೀರಾ?'' ಎಂದೂ ಪ್ರಶ್ನಿಸಿಯೇ ಬಿಟ್ಟಿದ್ದರು.
ಇನ್ನೊಬ್ಬರು ಪ್ರತಿಕ್ರಿಯಿಸಿ, “ಸೆಕ್ಸ್ ಉಚಿತ ಮೇಡಂ, ಪ್ರಿಯತಮೆ ಶಾಪಿಂಗ್ ಮತ್ತಿತರ ವಸ್ತುಗಳಿಗೆ ಬೇಡಿಕೆಯಿಡುತ್ತಾಳೆ ಆದರೆ ಸೆಕ್ಸ್ ಗಾಗಿ ಆಕೆಗೆ ಯಾವತ್ತೂ ಹಣ ನೀಡಿಲ್ಲ?, ನಿಮ್ಮ ಪತಿಯಿಂದ ಹಣ ಕೇಳುತ್ತೀರಾ?'' ಎಂದೂ ಪ್ರಶ್ನಿಸಿದ್ದಾರೆ.
"ಮೇಡಂ. ವಾಟ್ ಈಸ್ ಆನ್ ಯುವರ್ ಮೈಂಡ್ ಎಂದು ಫೇಸ್ ಬುಕ್ ಕೇಳುತ್ತದೆ, ಟ್ವಿಟರ್ ಅಲ್ಲ'' ಎಂದು ಒಬ್ಬರು ನೆನಪಿಸಿದ್ದಾರೆ.
Wait till Rahul Gandhi also promises free sex for every adult male for a certain number of days every year! https://t.co/5McRMIr9Fb
— MadhuPurnima Kishwar (@madhukishwar) January 29, 2019
Ma'm, it is the FB which cares about "What is on your mind", not twitter!https://t.co/kgw6WM5pSv
— Discourse Hacker (@Shudraism) January 29, 2019
have you ever paid for the sex????????????https://t.co/2rbDbdrYYc
— Ashok ಕನ್ನಡದ ಕಂದ (@buddha2019) January 29, 2019
I can't believe you have written it. Stumped. Sad.
— राहुल देव Rahul Dev (@rahuldev2) January 29, 2019
That’s why BJP MLA’s watched porn in Karnataka Vidhan Sabha and media got them red hand!!!! Where were u that time to throw ur free tweet
— Rohith (@peas1212) January 29, 2019