ಮಲಯಾಳಂ ನಟ ಶ್ರೀನಿವಾಸನ್ ಆಸ್ಪತ್ರೆಗೆ ದಾಖಲು

ಎರ್ನಾಕುಲಂ, ಜ.30: ಕೇರಳದ ಖ್ಯಾತ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್ ಅವರು ಎದೆ ನೋವಿನಿಂದಾಗಿ ಬುಧವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
61ರ ಹರೆಯದ ಶ್ರೀನಿವಾಸನ್ ಕೊಚ್ಚಿಯ ಎಡಪಳ್ಳಿಯ ಲಾಲ್ ಮಿಯಾ ಆರ್ಟ್ಸ್ ಸ್ಟುಡಿಯೋದಲ್ಲಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಳಿತದ ಸಮಸ್ಯೆಯಿಂದಾಗಿ ತಂದೆ ಶ್ರೀನಿವಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಆಸ್ಪತ್ರೆಯಲ್ಲಿ ರಾತ್ರಿ ತನಕ ಉಳಿಯುವಂತೆ ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ. ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಶ್ರೀನಿವಾಸನ್ ಪುತ್ರ ವಿನೀತ್ ಮಾಹಿತಿ ನೀಡಿದ್ದಾರೆ.
Next Story





